ನವದೆಹಲಿ NEWS DESK ಡಿ.29 : ತಾಲಿಬಾನ್ ಯೋಧರು ಇಂದು ಮುಂಜಾನೆ ಅಫ್ಘಾನಿಸ್ತಾನ-ಪಾಕ್ ಗಡಿಯಲ್ಲಿ ದಾಳಿ ನಡೆಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನಿ ವಾಯುಪಡೆ ನಡೆಸಿದ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. ತಾಲಿಬಾನಿಗಳು ಫಿರಂಗಿಗಳು ಮತ್ತು ಮೆಷಿನ್ ಗನ್ ಗಳ ಮೂಲಕ ದಾಳಿ ನಡೆಸಿದಾಗ ಸುಮಾರು 19 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಹೇಳಿಕೊಂಡಿದೆ. ಡ್ಯುರಾಂಡ್ ಲೈನ್ ಬಳಿಯ ಪಕ್ತಿಯಾ ಮತ್ತು ಖೋಸ್ಟ್ ಪ್ರದೇಶಗಳಲ್ಲಿ ಈ ಸಂಘರ್ಷ ನಡೆದಿದೆ ಎಂದು ತಾಲಿಬಾನ್ ರಕ್ಷಣಾ ಸಚಿವಾಲಯ ತಿಳಿಸಿದೆ.