
ಮಡಿಕೇರಿ NEWS DESK ಡಿ.29 : ಮರಗೋಡಿನ ಕಟ್ಟೆಮಾಡು ಶ್ರೀ ಮೃತ್ಯುಂಜಯ ದೇವಾಲಯದಲ್ಲಿ ನಡೆದ ಘಟನೆಯನ್ನು ಮಡಿಕೇರಿ ಕೊಡವ ಸಮಾಜ ತೀವ್ರವಾಗಿ ಖಂಡಿಸಿದೆ. ಮಡಿಕೇರಿಯ ಮಂದ್ ನಲ್ಲಿ ಕೊಡವ ಸಮಾಜದ ವತಿಯಿಂದ ನಡೆದ ಪುತ್ತರಿ ಕೋಲಾಟ್ ಕಾರ್ಯಕ್ರಮದ ನಂತರ ಸಮಾಜದ ಪ್ರಮುಖರು ಘಟನೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ಕೊಡವ ಜನಾಂಗದವರು ಪ್ರಾಚೀನ ಕಾಲದಿಂದಲೂ ಕೊಡವ ಸಾಂಪ್ರದಾಯಿಕ ಉಡುಗೆಯೊಂದಿಗೆ ದೇವಾಲಯಕ್ಕೆ ತೆರಳುವುದು ಮತ್ತು ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳುವ ಸಂಪ್ರದಾಯವಿದೆ. ಆದರೆ ಕಟ್ಟೆಮಾಡು ಗ್ರಾಮದಲ್ಲಿ ಜನಾಂಗವೊAದರ ವ್ಯಕ್ತಿಗಳು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ತೆರಳಿದವರನ್ನು ದೇವಾಲಯ ಪ್ರವೇಶಿಸದಂತೆ ಅಡ್ಡಿ ಪಡಿಸಿದ್ದಾರೆ ಎಂದು ಪ್ರಮುಖರು ಆರೋಪಿಸಿದರು. ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ನಡೆಯುವ ಹೋರಾಟಗಳಿಗೆ ಮಡಿಕೇರಿ ಕೊಡವ ಸಮಾಜ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಘೋಷಿಸಿದರು. ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಎಂ.ಪಿ.ಮುತ್ತಪ್ಪ, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತ ಬೊಳ್ಳಪ್ಪ, ಮಾಜಿ ಜಂಟಿಕಾರ್ಯದರ್ಶಿ ಶಾಂತೆಯಂಡ ಸನ್ನಿ ಪೂವಯ್ಯ, ಬೊಪ್ಪಂಡ ಶ್ಯಾಂ ಪೂಣಚ್ಚ, ಕಲಿಯಂಡ ಸರಸ್ವತಿ ಮಾತನಾಡಿದರು.













