ನಾಪೋಕ್ಲು ಜ.2 NEWS DESK : ಮಡಿಕೇರಿ ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಯಲ್ಲಿ 15 ಸ್ಥಾನಗಳಿಗೆ ಬಿಜೆಪಿಯ ಎಲ್ಲಾ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ನಾಪಂಡ ರ್ಯಾಲಿ ಮಾದಯ್ಯ, ಉಪಾಧ್ಯಕ್ಷರಾಗಿ ಅಜಯ್ ಹೊದ್ದೂರು, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಬೋಪಣ್ಣ, ಖಜಾಂಚಿಯಾಗಿ ಎಂ.ಎಸ್.ಶಂಭಯ್ಯ ಹಾಗೂ ಜಿಲ್ಲಾ ಸಮಿತಿ ಪ್ರತಿನಿಧಿಯಾಗಿ ಕೋಡಿ ಕೆ.ಪೊನ್ನಪ್ಪ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಕಿಶೋರ್ ಕುಮಾರ್, ಉಮೇಶ್ ಪಳಂಗಪ್ಪ, ಅಯ್ಯಲಪಂಡ ಕಾರ್ಯಪ್ಪ, ಸಿ.ಎಸ್.ಉದಯಕುಮಾರ್, ಸನ್ನಿ ತಿಮ್ಮಯ್ಯ, ಮುಕ್ಕಾಟಿರ ಹರೀಶ್, ಕೋಡಿ ಪೊನ್ನಪ್ಪ, ನಾಗೇಶ್ ಕುಂದಲ್ಪಾಡಿ, ಕೆ.ಆರ್ ರಾಜಾರಾಮ, ಮುಂಡಂಡ ಕಾರ್ಯಪ್ಪ, ನಾಪಂಡ ರವಿ ಕಾಳಪ್ಪ ಆಯ್ಕೆಯಾಗಿದ್ದಾರೆ.
ವರದಿ : ದುಗ್ಗಳ ಸದಾನಂದ.