ಮಡಿಕೇರಿ ಜ.3 NEWS DESK : ದೆಹಲಿಯಲ್ಲಿ ಜ.26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಕರ್ನಾಟಕ19 ಬೆಟಾಲಿಯನ್ ಆರ್ಮಿ ವಿಂಗ್ ಗೆ ಕೊಡಗಿನ ಎಂ.ಆರ್.ಹೇಮಂತ್ ಆಯ್ಕೆಯಾಗಿದ್ದಾನೆ. ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ತೃತೀಯ ವರ್ಷದ ಬಿ.ಸಿ.ಎ ವ್ಯಾಸಂಗ ಮಾಡುತ್ತಿರುವ ಹೇಮಂತ್ ಕಾಟಕೇರಿ ಗ್ರಾಮದ ಮಜ್ಜೇಗೌಡನ ರಾಜೇಶ್ ಮತ್ತು ಪ್ರಮೀಳಾ ದಂಪತಿಯ ಪುತ್ರ.