ಮಡಿಕೇರಿ ಜ.4 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಜೆ.ಸಿ.ಐ ಪೊನ್ನಂಪೇಟೆ ನಿಸರ್ಗ ಸಹಯೋಗದಲ್ಲಿ ಜ.5 ರಂದು ಮಾಯಮುಡಿಯಲ್ಲಿ ತೋಕ್ ನಮ್ಮೆ ನಡೆಯಲಿದೆ. ಮಾಯಮುಡಿ ಸರ್ಕಾರಿ ಶಾಲಾ ಮೈದಾನದಲ್ಲಿ ಬೆಳಿಗ್ಗೆ 9.30 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ ಉಪಸ್ಥಿತರಿರಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಜೆ.ಸಿ.ಐ ಪೊನ್ನಂಪೇಟೆ ನಿಸರ್ಗ ಅಧ್ಯಕ್ಷ ಜೇಸಿ ಪೆಮ್ಮಂಡ ಮಂಜು ಬೋಪಣ್ಣ, ದಕ್ಷಿಣ ಭಾರತದ ಡಿ.ಹೆಚ್.ಎಲ್. ಇ.ಕಾಂ ಉಪಾಧ್ಯಕ್ಷ ಬಾಳೆಯಡ ಕರುಣ್ ಕಾಳಯ್ಯ, ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ, ಕೊಡಗು ಜಬ್ಬೂಮಿ ಟ್ರಸ್ಟ್ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ, ಕೋಲುಬಾಣೆ ಕಾವೇರಿ ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಟಿಪ್ಪು ಬಿದ್ದಪ್ಪ, ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಎನ್.ಪ್ರಥ್ಯು, ಕೋಲುಬಾಣೆ ಕಾವೇರಿ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಕಾಳಪಂಡ ಸಿ.ಸುಧೀರ್, ಜೆಸಿಐ ವಲಯ 14ರ ವಲಯ ನಿರ್ದೇಶಕ ಜೇಸಿ ಪಾರುವಂಗಡ ದಿಲನ್ ಚಂಗಪ್ಪ, ಯೋಜನಾ ನಿರ್ದೇಶಕ ಜೇಸಿ ಚೋನಿರ ಬಿ.ಸೋಮಣ್ಣ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ವಕೀಲ ಬಲ್ಯಮಾಡ ಬಿ.ಮಾದಪ್ಪ ವಿಚಾರ ಮಂಡಣೆ ಮಾಡಲಿದ್ದಾರೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು ಜೆಸಿಐ ಪೊನ್ನಂಪೇಟೆ ನಿಸರ್ಗದ ಅಧ್ಯಕ್ಷ ಜೇಸಿ ಪೆಮ್ಮಂಡ ಮಂಜು ಬೋಪಣ್ಣ ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ, ಜೆಎಸಿ ವಲಯ 14ರ ನಿರ್ದೇಶಕ ಅಪ್ಪಡೇರಂಡ ದಿನು, ಮಾಯಮುಡಿ ಗ್ರಾ.ಪಂ ಅಧ್ಯಕ್ಷ ಆಪಟ್ಟೀರ ಟಾಟು ಮೊಣ್ಣಪ್ಪ, ಬಿ.ಶೆಟ್ಟಿಗೇರಿ ಗ್ರಾ.ಪಂ ಅಧ್ಯಕ್ಷ ಕೊಲ್ಲೀರ ಬೋಪಣ್ಣ, ಉದ್ಯಮಿ ಹಾಗೂ ಬಿಟ್ಟಂಗಾಲದ ಕಾಫಿ ಬೆಳೆಗಾರ ಪೊನ್ನಕಚ್ಚೀರ ಬಿದ್ದು, ಕಾನೂರು ಗ್ರಾ.ಪಂ ಸದಸ್ಯ ಸುಳ್ಳಿಮಾಡ ದೀಪಕ್ ಮೊಣ್ಣಪ್ಪ, ಕಾಫಿ ಬೆಳೆಗಾರರಾದ ಕಟ್ಟೇರ ಪಾರ್ವತಿ ಜೀವನ್, ಕಡೇಮಾಡ ದೇವಯ್ಯ(ಕನಸು), ಸುಳ್ಳಿಮಾಡ ರಕ್ಷಿತ್ ಅಯ್ಯಪ್ಪ, ತೀತಿಮಾಡ ಲಿಖಿತ್, ಕಾಳಿಮಾಡ ಸಚಿನ್, ಕರ್ತಮಾನ ರಾಯ್, ಪೊನ್ನಂಪೇಟೆ ಪಿ.ಡಬ್ಲ್ಯೂಡಿ ಕ್ಲಾಸ್ 1 ಕಾಂಟ್ರಕ್ಟರ್ ಕೊಕ್ಕಲೆಮಾಡ ತನು ತಿಮ್ಮಯ್ಯ ಪಾಲ್ಗೊಳ್ಳಲಿದ್ದಾರೆ.