ಮಡಿಕೇರಿ ಜ.4 NEWS DESK : ಜಿಲ್ಲಾ ಕ್ರೀಡಾಂಗಣದಲ್ಲಿರುವ ಕಿರಿಯ ಕ್ರೀಡಾ ವಸತಿ ನಿಲಯಕ್ಕೆ ಅಥ್ಲೆಟಿಕ್ಸ್ ಮತ್ತು ಹಾಕಿ ಕ್ರೀಡೆಯಲ್ಲಿ 2025-26 ನೇ ಸಾಲಿಗೆ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯು ಜನವರಿ, 16 ರಂದು ಮಡಿಕೇರಿ ತಾಲ್ಲೂಕಿನವರಿಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ, ಜ.17 ರಂದು ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕಿನವರಿಗೆ ಕೂಡಿಗೆ ಸರ್ಕಾರಿ ಕ್ರೀಡಾ ಶಾಲೆಯಲ್ಲಿ, ಜನವರಿ, 18 ರಂದು ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನವರಿಗೆ ಪೊನ್ನಂಪೇಟೆಯ ತಾಲ್ಲೂಕು ಮಿನಿ ಕ್ರೀಡಾಂಗಣದಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆ ನಡೆಯಲಿದೆ. ಕ್ರೀಡಾ ಶಾಲೆಯ ಆಯ್ಕೆಗೆ 01-06-2025 ಕ್ಕೆ 11 ವರ್ಷದೊಳಗಿರಬೇಕು.(ಅಂದರೆ 01-06-2014 ರ ನಂತರ ಜನಿಸಿರಬೇಕು), 2025-26ನೇ ಸಾಲಿಗೆ 5ನೇ ತರಗತಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಹಾಕಿ ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು 140 ಸೆಂ.ಮೀ. ಎತ್ತರವಿರಬೇಕು.
ಹೆಚ್ಚಿನ ಮಾಹಿತಿಗೆ ಬಿ.ಜಿ.ಮಂಜುನಾಥ್, ಅಥ್ಲೇಟಿಕ್ ತರಬೇತುದಾರರು, ಕ್ರೀಡಾ ಶಾಲೆ ಕೂಡಿಗೆ ಸೋಮವಾರಪೇಟೆ ಮತ್ತು ಕುಶಾಲನಗರಕ್ಕೆ ದೂ.ಸಂ. 9342563014, ವೆಂಕಟೇಶ್ ಬಿ.ಎಸ್. ಹಾಕಿ ತರಬೇತುದಾರರು, ಕ್ರೀಡಾ ಶಾಲೆ, ಕೂಡಿಗೆ ಸೋಮವಾರಪೇಟೆ ಮತ್ತು ಕುಶಾಲನಗರಕ್ಕೆಕ ದೂ. 9844326007, ದಿನಾಮಣಿ, ಹಾಕಿ ತರಬೇತುದಾರರು, ಕ್ರೀಡಾ ಶಾಲೆ, ಕೂಡಿಗೆ ಸೋಮವಾರಪೇಟೆ ಮತ್ತು ಕುಶಾಲನಗರಕ್ಕೆ ದೂ. ಸಂ.9663241305, ಸೋಮವಾರಪೇಟೆ ಮತ್ತು ಕುಶಾಲನಗರಕ್ಕೆ ಸುರೇಶ್ ಜಿ. ಜಿಮ್ನಾಸ್ಟಿಕ್ ತರಬೇತುದಾರರು, ಕ್ರೀಡಾ ಶಾಲೆ ಕೂಡಿಗೆ ದೂ.ಸಂ. 9483629216. ಮಡಿಕೇರಿ ತಾಲ್ಲೂಕಿಗೆ ಮಹಾಬಲ ಕೆ., ಅಥ್ಲೇಟಿಕ್ ತರಬೇತುದಾರರು, ಕ್ರೀಡಾ ನಿಲಯ, ಮಡಿಕೇರಿ ದೂ.ಸಂ.9980887499, ಕೆ.ಕೆ.ಬಿಂದ್ಯಾ, ಹಾಕಿ ತರಬೇತುದಾರರು, ಕ್ರೀಡಾ ನಿಲಯ, ಮಡಿಕೇರಿ ದೂ.ಸಂ. 8105122430. ಪೊನ್ನಂಪೇಟೆ ಮತ್ತು ವಿರಾಜಪೇಟೆಗೆ ಕೆ.ಎಂ.ಸುಬ್ಬಯ್ಯ, ಹಾಕಿ ತರಬೇತುದಾರರು, ಕ್ರೀಡಾ ನಿಲಯ ಪೊನ್ನಂಪೇಟೆ ದೂ.ಸಂ. 8197790350 ಹಾಗೂ ಗಣಪತಿ, ಹಾಕಿ ತರಬೇತುದಾರರು, ಕ್ರೀಡಾ ನಿಲಯ ಪೊನ್ನಂಪೇಟೆ ದೂ.ಸಂ. 8951287301 ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ಆಯ್ಕೆಯಲ್ಲಿ ಭಾಗವಹಿಸಲು ಬರುವಂತಹ ಕ್ರೀಡಾಪಟುಗಳು ಪ್ರಸ್ತುತ 4ನೇ ತರಗತಿಯಲ್ಲಿ ಓದುತ್ತಿರುವ ದೃಢೀಕರಣ ಪತ್ರವನ್ನು ಶಾಲೆಯ ಮುಖ್ಯೋಪಾಧ್ಯಾಯರಿಂದ ದೃಢೀಕರಿಸಿ ಕಡ್ಡಾಯವಾಗಿ ತರಬೇಕು. ದೈಹಿಕ ಸಾಮಥ್ರ್ಯದ ಬಗ್ಗೆ ಸರ್ಕಾರಿ ವೈದ್ಯರಿಂದ ವೈದ್ಯಕೀಯ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ತರಬೇಕು. ಆಯ್ಕೆಯಲ್ಲಿ ಭಾಗವಹಿಸಲು ಬರುವಂತಹ ಕ್ರೀಡಾಪಟುಗಳು ಜನನ ಪ್ರಮಾಣ ಪ್ರ ಹಾಗೂ ಆಧಾರ್‍ಕಾರ್ಡ್ ಅನ್ನು ಕಡ್ಡಾಯವಾಗಿ ತರಬೇಕು. ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಊಟೋಪಹಾರ, ವಸತಿ ವ್ಯವಸ್ಥೆ ಮತ್ತು ಕ್ರೀಡಾ ಕಿಟ್ ಅನ್ನು ಇಲಾಖೆ ವತಿಯಿಂದ ಉಚಿತವಾಗಿ ಒದಗಿಸಲಾಗುವುದು. ಆಯ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಇಲಾಖೆ ವತಿಯಿಂದ ಯಾವುದೇ ಭತ್ಯೆ ನೀಡಲಾಗುವುದಿಲ್ಲ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.