ಮಡಿಕೇರಿ ಜ.11 NEWS DESK : ಮಡಿಕೇರಿ ನಗರದ ಶಕ್ತಿ ಪೀಠಗಳಲ್ಲಿ ಒಂದಾದ ಮಂಗಳಾದೇವಿ ನಗರದ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಪುನರ್ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ಜ.14 ಮತ್ತು 15 ರಂದು ನಡೆಯಲಿದೆ. ಜ.14 ರಂದು ಸಂಜೆ 6 ಗಂಟೆಯಿಂದ ಪ್ರಾರ್ಥನೆ, ಪುಣ್ಯ, ಸಪ್ತಶುಧ್ಧಿ, ಪ್ರಸಾದ ಶುಧ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಹೋಮ, ದಿಶಾ ಬಳಿ ನಂತರ ಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಜ.15 ರಂದು ಬೆಳಗ್ಗೆ 8 ಗಂಟೆಯಿಂದ ಪುಣ್ಯಾಹ, ಗಣಪತಿ ಹೋಮ, ಚಂಡಿಕಾ ಹೋಮ, ನವಕಲಶ ಪೂಜೆ, ಪ್ರಧಾನ ಹೋಮ, ನಾಗದೇವರಿಗೆ ತಂಬಿಲ, ಆಶ್ಲೇಷ ಬಳಿ, ಕಲಶಾಭಿಶೇಕ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಯಿಂದ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5.30ಕ್ಕೆ ಸಾಯಂಪೂಜೆ, 6.30ಕ್ಕೆ ರಂಜಪೂಜೆ, 7 ಗಂಟೆಗೆ ದೇವಾಲಯದ ಆವರಣದಲ್ಲಿ ಬಲಿ ಉತ್ಸವ, ರಾಜಾಂಗಣ ಪ್ರಸಾದ, ಪೀಠ ಪೂಜೆ, ಶುದ್ಧಿ ಕಲಶಾಭಿಶೇಕ, ಮಂತ್ರಾಕ್ಷತೆ ನಂತರ ಅನ್ನಸಂತರ್ಪಣೆ ನೆರವೇರಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಸಮಿತಿ ಕೋರಿದೆ. ಚಂಡಿಕಾ ಹೋಮ ಮತ್ತು ಆಶ್ಲೇಷ ಬಲಿ ಸಂಕಲ್ಪ ಮಾಡುವ ಭಕ್ತರು ದೇವಾಲಯದ ಆಡಳಿತ ಮಂಡಳಿಯನ್ನು ಸಂಪರ್ಕಿಸುವಂತೆ ಕೋರಿದೆ. ಹೆಚ್ಚಿನ ಮಾಹಿತಿಗೆ 9448325136, 9880118706 ಸಂಪರ್ಕಿಸಬಹುದಾಗಿದೆ.