
ವಿರಾಜಪೇಟೆ ಜ.17 NEWS DESK : ಎಲ್ಲಾ ರೀತಿಯ ಕ್ರೀಡಾಕೂಟಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಫೆಬ್ರವರಿ 2 ರಿಂದ ಲೀಗ್ ಮಾದರಿಯ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಕ್ರೀಡಾ ಆಯೋಜಕರು ತಿಳಿಸಿದರು. ವಿರಾಜಪೇಟೆ ಫ್ರೆಂಡ್ಸ್ ವತಿಯಿಂದ ನಗರದ ಚಿಕ್ಕಪೇಟೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ತಾಲ್ಲೂಕು ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ಕೊಡಗು ಶಟಲ್ ಬ್ಯಾಡ್ಮಿಂಟನ್ ಲೀಗ್-2ನೇ ಅವೃತ್ತಿಯ ಕ್ರೀಡಾಪಟುಗಳ ಬಿಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜನ ಸೇವಾ ಟ್ರಸ್ಟ್ ನ ಅಧ್ಯಕ್ಷ ಎಂ.ಇ.ಶರೀಫ್ ಮಾತನಾಡಿ, ಎಲ್ಲಾ ಕ್ರೀಡೆಗಳನ್ನು ಸಮಾನತೆಯಿಂದ ಕಾಣಬೇಕು ಮತ್ತು ಗೌರವಿಸುವಂತಾಗಬೇಕು. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಪಂದ್ಯಾವಳಿಗಳ್ನು ಆಯೋಜಸಲಾಗುತ್ತಿದೆ, ಸೋಲು ಗೆಲುವನ್ನು ಪರಿಗಣಿಸದೆ ಕ್ರೀಡಾ ಸ್ಫೂರ್ತಿಯಿಂದ ಭಾಗವಹಿಸುವಂತಾಗಬೇಕು ಎಂದು ಹೇಳಿದರು. ವಿರಾಜಪೇಟೆ ಫ್ರೆಂಡ್ಸ್ ಆಯೋಜಕ ಪಿ.ವೈ.ಇರ್ಷಾದ್ ಮಾತನಾಡಿ, ಫೆ.2 ರಂದು ವಿರಾಜಪೇಟೆ ಒಳಾಂಗಣ ಕ್ರೀಡಾಂಗಣದಲ್ಲಿ ಲೀಗ್ ಮಾದರಿಯಲ್ಲಿ ಡಬಲ್ಸ್ ಪಂದ್ಯಾವಳಿ ನಡೆಯಲಿದೆ ಎಂದರು. ಜಿಲ್ಲೆಯ ಸಿ.ಡಿ ಗ್ರೂಫ್ ವಿರಾಜಪೇಟೆ, ಶೀಹಾ ಸ್ಮೇಶರ್ಸ್ ವಿರಾಜಪೇಟೆ, ಟೀಮ್ ಸಿದ್ದಾಪುರ, ಸ್ಮಯಿಲ್ ವಾರಿಯರ್ಸ್ ಸುಂಟಿಕೊಪ್ಪ, ಜಂಪ್ ಸ್ಮೆಶ್ ಕುಶಾಲನಗರ ಮತ್ತು ಶಟಲ್ ಬ್ಲಾಸ್ಟರ್ಸ್ ನೆಲ್ಯಹುದಿಕೇರಿ ಒಟ್ಟು ಆರು ತಂಡಗಳು ಭಾಗವಹಿಸಲಿದೆ. ಒಂದು ತಂಡದಲ್ಲಿ 11 ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾ ಮಟ್ಟ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಖ್ಯಾತಿ ಪಡೆದ ಪ್ರಮುಖ ಅಟಗಾರರು ಸೇರಿದಂತೆ ಒಟ್ಟು 110 ಕ್ರೀಡಾ ಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ವಿಜೇತರಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಹಾಗೂ ವೈಯುಕ್ತಿಕ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿರಾಜಪೇಟೆ ಪುರಸಭೆಯ ಸದಸ್ಯ ಅಬ್ದುಲ್ ಜಲೀಲ್, ಉದ್ಯಮಿ ಐಕ್ಯೂಬ್ ಶಾನ್, ವಿರಾಜಪೇಟೆ ಫ್ರೆಂಡ್ಸ್ ಸಂಸ್ಥೆಯ ಅಧ್ಯಕ್ಷ ಎಂ.ಕೆ.ರವೂಫ್, ಉಪಧ್ಯಕ್ಷ ಸಿ.ಎ.ರಾಸಿಕ್, ಖಜಾಂಚಿ ನವಾಫ್ ಮತ್ತು ವಿವಿಧ ತಂಡಗಳ ಮಾಲೀಕರು, ಕ್ರೀಡಾಪಟುಗಳು ಹಾಜರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ









