ಮಡಿಕೇರಿ ಜ.17 NEWS DESK : ಸುಂಟಿಕೊಪ್ಪದ ಗದ್ದೇಹಳ್ಳ ಆ್ಯಮಿಟಿ ಯುನೈಟೆಡ್ ಎಫ್.ಸಿ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಜ.23 ರಿಂದ 26ರ ವರೆಗೆ ಅಖಿಲ ಭಾರತ 5+2 ಹೊನಲು ಬೆಳಕಿನ ಕಾಲ್ಚೆಂಡು ಪಂದ್ಯಾವಳಿ ನಡೆಯಲಿದೆ ಎಂದು ಆ್ಯಮಿಟಿ ಯುನೈಟೆಡ್ ಎಫ್.ಸಿಯ ಸದಸ್ಯ ಎಸ್.ಎ.ಸತ್ತಾರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದ್ದೇಹಳ್ಳದ ಸೈಟ್ ಗ್ರೌಂಡ್‍ನಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ಏಳನೇ ವರ್ಷದ ಪಂದ್ಯಾವಳಿಗೆ ಜ.23 ರಂದು ಸಂಜೆ 3 ಗಂಟೆಗೆ ಚಾಲನೆ ದೊರೆಯಲಿದೆ ಎಂದು ತಿಳಿಸಿದರು. ಪಂದ್ಯಾವಳಿಯ ಪ್ರಥಮ ವಿಜೇತರಿಗೆ ರೂ.1,00,001, ದ್ವಿತೀಯ ರೂ.50,005 ನಗದು ಮತ್ತು ಬೀಟೆ ಮರದ ಆಕರ್ಷಕ ಟ್ರೋಫಿ ನೀಡಲಾಗುವುದು. ಅಲ್ಲದೇ ಅತ್ಯುತ್ತಮ ಶಿಸ್ತುಬರಿತ ತಂಡ, ಅತ್ಯುತ್ತಮ ಆಟಗಾರ, ಅತೀ ಹೆಚ್ಚು ಗೋಲುಗಳಿಸಿದ ಆಟಗಾರ, ಉತ್ತಮ ರಕ್ಷಕ ಆಟಗಾರ, ಅತ್ಯುತ್ತಮ ಗೋಲಿ, ಪ್ರತೀ ಪಂದ್ಯದಲ್ಲಿ ಮ್ಯಾನ್ ಆಫ್ ದ ಮ್ಯಾಚ್ ಬಹುಮಾನವನ್ನು ನೀಡಲಾಗುವುದೆಂದರು. ಪಂದ್ಯಾವಳಿಯ ಮೈದಾನ ಶುಲ್ಕ ರೂ.3000 ನಿಗಧಿಪಡಿಸಿದ್ದು, ಕನಿಷ್ಟ ರೂ.1,000 ನಗದು ಪಾವತಿಸಿ ತಂಡದ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ಸತ್ತಾರ್ ಮನವಿ ಮಾಡಿದರು. ಹೆಚ್ಚಿನ ವಿವರಗಳಿಗಾಗಿ 6366680931, 8431235217, 9741545866, 9741408405 ಸಂಪರ್ಕಿಸಬಹುದಾಗಿದೆ ಎಂದರು.
ಸನ್ಮಾನ :: ಭಾರತದ ಸ್ವಚ್ಚತೆಗೆ ಸಂಬಂಧಿಸಿದಂತೆ ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ವರದಿಯಲ್ಲಿ ಕರ್ನಾಟಕದ 50 ನಗರಗಳಲ್ಲಿ ದೇಶದಲ್ಲಿಯೇ ಅತ್ಯಂತ ಸ್ವಚ್ಚ ನಗರ ಎಂಬ ಹೆಗ್ಗಳಿಕೆಗೆ ಮಡಿಕೇರಿ ಪಾತ್ರವಾಗಿದೆ. ನಗರದ ಸ್ವಚ್ಚತಾ ಸಿಬ್ಬಂದಿಗಳು ಮತ್ತು ಪೌರ ಕಾರ್ಮಿಕರು ಇದಕ್ಕೆ ಕಾರಣರಾಗಿದ್ದಾರೆ. ಈ ಹಿನ್ನೆಲೆ ಅಂದಿನ ಕಾರ್ಯಕ್ರಮದಲ್ಲಿ ಮಡಿಕೇರಿ ನಗರದಸಭೆಯ ಪೌರ ಕಾರ್ಮಿಕರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಉಸ್ತುವಾರಿ ಎಂ.ಎಂ.ನೌಫಲ್, ಅಧ್ಯಕ್ಷ ಎಂ.ಎ.ರಶೀದ್, ಸದಸ್ಯರಾದ ಎಂ.ಇ.ಅಕ್ಬರ್, ರಂಶಿದ್ ಉಪಸ್ಥಿತರಿದ್ದರು.