ಮಡಿಕೇರಿ NEWS DESK ಜ.17 : ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ದಕ್ಷತೆಯನ್ನು ಮೆರೆಯುತ್ತಿರುವ ಕೊಡಗು ಜಿಲ್ಲಾ ಪೊಲೀಸ್ ಹೊಸ ಪ್ರಯತ್ನವೊಂದಕ್ಕೆ ಮುಂದಾಗಿದೆ. ನಿತ್ಯ ಕರ್ತವ್ಯದ ಒತ್ತಡದಲ್ಲೇ ಇರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕೊಂಚ ಮನೋರಂಜನೆಯೂ ಬೇಕು ಎನ್ನುವ ಉದ್ದೇಶದಿಂದ “ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆ”ಯನ್ನು (ಕೊಡಗು ಪೊಲೀಸ್ ಕಲ್ಚರಲ್ ಕ್ಲಬ್) ರಚಿಸಲಾಗಿದೆ. ಈ ಸಾಂಸ್ಕೃತಿಕ ವೇದಿಕೆಯ ಉದ್ಘಾಟನಾ ಸಮಾರಂಭ ಜನವರಿ 26ರಂದು ಮಡಿಕೇರಿಯ ಪೊಲೀಸ್ ಕವಾಯತು ಮೈದಾನದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಉದ್ಘಾಟನಾ ಸಮಾರಂಭದ ಪ್ರಯುಕ್ತ ಸಂಜೆ 5.30 ಗಂಟೆಗೆ ಮಂಗಳೂರಿನ ಖ್ಯಾತ ಕಲಾವಿದರು ಹಾಗೂ ಜೀ಼ ಕನ್ನಡ ಸರಿಗಮಪ ಖ್ಯಾತಿಯ ಕಲಾವಿದರಿಂದ ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸರ್ವರೂ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೊಡಗು ಪೊಲೀಸ್ ಮನವಿ ಮಾಡಿದೆ.










