ಸೋಮವಾರಪೇಟೆ NEWS DESK ಜ.17 : ಸೋಮವಾರಪೇಟೆ ತಾಲ್ಲೂಕಿನ ವಿವಿಧೆಡೆಗಳಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಕಳ್ಳಭಟ್ಟಿ ಸಾರಾಯಿ ಮತ್ತು ಪುಳಿಗಂಜಿ ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ದೊಡ್ಡತೋಳೂರು ಗ್ರಾಮದ ಮನೆಯಲ್ಲಿ 9 ಲೀಟರ್ ಪುಳಗಂಜಿ, 200 ಮಿ.ಲೀ ಕಳ್ಳಭಟ್ಟಿ ಸಾರಾಯಿ, ಮತ್ತೊಂದು ಮನೆಯಲ್ಲಿ 3.5 ಲೀ ಕಳ್ಳಭಟ್ಟಿ ಸಾರಾಯಿ, 20 ಲೀ ಬೆಲ್ಲದ ಪುಳಗಂಜಿ ಮತ್ತು ಡಿಸ್ಟಿಲರಿ ಪರಿಕರಗಳನ್ನು ಪತ್ತೆ ಮಾಡಿ ವಶಕ್ಕೆ ತೆಗೆದುಕೊಳ್ಳಲಾಯಿತು. ಮತ್ತೊಬ್ಬರ ಮನೆಯಿಂದ 30 ಲೀ ಪುಳಗಂಜಿ ಮತ್ತು ಕಳ್ಳಬಟ್ಟಿ ತಯಾರಿಸಲು ಬಳಸುತ್ತಿದ್ದ ಇತರೆ ಪರಿಕರಗಳನ್ನು ವಶಕ್ಕೆ ಪಡೆದು 3 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಬಕಾರಿ ನಿರೀಕ್ಷಕ ಬಿ.ಎಸ್.ಲೋಕೇಶ್ ತಿಳಿಸಿದ್ದಾರೆ. ಕಾರ್ಯಚರಣೆಯಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಉಪನಿರೀಕ್ಷಕರಾದ ಬಿ.ಎಸ್.ಬಾಲಕೃಷ್ಣ, ಕೆ.ವಿ.ಸುಮತಿ, ಮುಖ್ಯಪೇದೆ ವಿರೇಶ್, ಸುರೇಶ್, ಸಿಬ್ಬಂದಿಗಳಾದ ಈರಣ್ಣ, ಕರಿಯಪ್ಪ, ಮಹಾಂತೇಶ್, ವಾಹನ ಚಾಲಕಿ ದಿವ್ಯ ಭಾಗವಹಿಸಿದ್ದರು.