ಕುಶಾಲನಗರ ಜ.18 NEWS DESK : ಕುಶಾಲನಗರದ 122ನೇ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ನಾಲ್ಕನೇ ಬಾರಿಗೆ ಟಿ.ಆರ್.ಶರವಣ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಕೆ.ವಿ.ನೇತ್ರಾವತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಯಾರೂ ಕೂಡಾ ನಾಮಪತ್ರ ಸಲ್ಲಿಸದ ಕಾರಣ, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾದವರು. ಅಧ್ಯಕ್ಷರಾಗಿ ಆಯ್ಕೆಯಾದ ನಂತರಮಾತನಾಡಿದ ಟಿ.ಆರ್.ಶರವಣ ಕುಮಾರ್, ಈ ಬಾರಿಯ ಚುನಾವಣೆಯಲ್ಲಿ ಬ್ಯಾಂಕಿನ ಬಗ್ಗೆ ಆರೋಪಗಳು, ಅಪಪ್ರಚಾರಗಳು ನಡೆದಿದ್ದವು. ಆದರೆ ಮತದಾರರು ಅವುಗಳಿಗೆ ಕಿವಿಕೊಡದೇ ನಮ್ಮ ತಂಡವನ್ನು ಆಯ್ಕೆಮಾಡಿದ್ದಾರೆ. ಇದೀಗ ಅಧ್ಯಕ್ಷರಾಗಿ ನಾಲ್ಕನೇ ಬಾರಿ ಆಯ್ಕೆಯಾಗಿದ್ದು, ಬ್ಯಾಂಕಿನ ಅಭಿವೃದ್ಧಿಗಾಗಿ ಶ್ರಮವಹಿಸಲಾಗುವುದು. ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ ನಿರ್ದೇಶಕರಿಗೆ ಹಾಗೂ ಬ್ಯಾಂಕಿನ ಮತದಾರರಿಗೆ ಧನ್ಯವಾದಗಳು ಎಂದರು. ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಸಂದೀಪ್ ಅವರು ನಡೆಸಿಕೊಟ್ಟರು. ಈ ಸಂದರ್ಭ ನೂತನವಾಗಿ ಆಯ್ಕೆಯಾದ ನಿರ್ದೇಶಕರು, ಊರಿನ ಪ್ರಮುಖರು ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಇದ್ದರು.