ಮಡಿಕೇರಿ ಜ.18 NEWS DESK : ಸ್ವಾಭಾವಿಕ ಪ್ರಕೃತಿ ವಿಕೋಪ ಅನಿರೀಕ್ಷಿತ ಅಕಸ್ಮಿಕ ಬೆಂಕಿ ಅವಘಡ ಹಾಗೂ ಅಪಘಾತಗಳು ಸಂಭವಿಸಿದಾಗ ಅದನ್ನು ನಿಭಾಯಿಸಲು ನಾವು ಸದಾ ಸನ್ನದ್ದರಾಗಬೇಕು. ಇದರ ಭಾಗವಾಗಿ ಹೆಚ್.ಆರ್.ಎಸ್ ರಕ್ಷಣಾ ತಂಡದಿಂದ ಇಂತಹ ಕಾರ್ಯಕ್ರಮಗಳು ಎಲ್ಲಡೆ ನಡೆಯಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಹಾಗೂ ವಕೀಲರಾದ ಸಮೀರ್ ಹೇಳಿದರು. ಹೆಚ್.ಆರ್.ಎಸ್ ಗೋಣಿಕೊಪ್ಪ ಹಾಗೂ ಸಾಲಿಡಾರಿಟಿ ಯೂತ್ ವಿಂಗ್ ಸಹಯೋಗದಲ್ಲಿ ನಡೆದ ಹೆಚ್.ಆರ್.ಎಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಹ್ಯೂಮಾನಿಟಿ ರಿಲೀಪ್ ಸೊಸೈಟಿಯ ಗೋಣಿಕೊಪ್ಪಲು ಇದರ ಲೋಗೋ ಅನಾವರಣ ಗೊಳಿಸಿ ಮಾತನಾಡಿದರು. ಜ.ಇಬ್ರಾಹಿಂ ಮೌಲವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮೈಸೂರು ವಲಯ ಕಾರ್ಯದರ್ಶಿ ಪಿ.ಕೆ.ಅಬ್ದುಲ್ ರೆಹಮಾನ್, ಸಗೀರ್ ಮೌಲವಿ, ಸಾಮಾಜಿಕ ಕಾರ್ಯಕರ್ತ ಸಲಿಮ್ ಪಾಲ್ಗೊಂಡು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಪ್ರಥಮ ಚಿಕಿತ್ಸಾ ವಿಧಾನದ ಬಗ್ಗೆ ಲಘು ತರಬೇತಿಯನ್ನು ಹೆಚ್.ಆರ್.ಎಸ್ ನ ತರಬೇತುದಾರ ಉಡುಪಿಯ ಸಲೀಮ್ ಹಾಗೂ ಮಲ್ಪೆಯ ಝುಬೇರ್ ಪ್ರಾತ್ಯಕ್ಷಿಕೆ ನೀಡಿದರು. ತಂಝೀಲ್ ಸ್ವಾಗತಿಸಿದರು, ತನ್ವೀರ್ ಅಹಮದ್ ನಿರೂಪಿಸಿದರು.