ಸೋಮವಾರಪೇಟೆ ಜ.18 NEWS DESK : ಶ್ರೀ ಬಸವೇಶ್ವರ ದೇವಾಲಯದ ವಿಮಾನಗೋಪುರ ಕಳಸ ಪ್ರತಿಷ್ಠಾಪನಾ ಪಂಚ ದಶಮಾನೋತ್ಸವ ಪೂಜಾ ಕಾರ್ಯಕ್ರಮ ಜ.23 ಮತ್ತು 24ರಂದು ನಡೆಯಲಿದೆ ಎಂದು ದೇವಾಲಯದ ಯಜಮಾನರಾದ ಬಿ.ಪಿ.ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ಥಳೀಯ ವಿರಕ್ತ ಮಠದ ನಿಶ್ಚಲ ನಿರಂಜನ ದೇಶಿಕೇಂದ್ರ ಮಹಾಸ್ವಾಮಿಗಳು, ಬಸವಪಟ್ಟಣದ ತೊಂಟದಾರ್ಯ ಸಂಸ್ಥಾನ ಮಠದ ಬಸವಲಿಂಗ ಶಿವಯೋಗಿಗಳು, ಶನಿವಾರಸಂತೆ ಸಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಮಹಾಸ್ವಾಮಿ ಹಾಗೂ ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಜ.23 ರಂದು ಬೆಳಿಗ್ಗೆ 7.30 ಗಂಟೆಗೆ ಗಂಗಾ ಪೂಜೆ, ಮಹಾಗಣಪತಿ ಪೂಜೆ, ವಾಸ್ತು ಪೂಜೆ ನಡೆಯಲಿದೆ. ಸಂಜೆ 4 ಗಂಟೆಗೆ ಶ್ರೀ ಮಹಾಗಣಪತಿ ಹೋಮ, ವಾಸ್ತು ಹೋಮ, ಅಘೋರ ಹೋಮ, ಆದಿತ್ಯಾದಿ ನವಗ್ರಹ ಮಹಾ ಮೃತ್ಯುಂಜಯ ಹೋಮ, ಕಾಳ ಹೋಮ, ಅವಾಹಿತ ಕಲಶಾಧಿ ದೇವತೆಗಳ ಹೋಮ ಪೂಜೆ ನಂತರ ಪೂರ್ಣ ಫಲ ಸಮರ್ಪಣೆ ಜರುಗಲಿದೆ. ಜ.24 ರಂದು ಬೆಳಿಗ್ಗೆ 5 ಗಂಟೆಗೆ ಶುಭ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಬಸವೇಶ್ವರ ಸ್ವಾಮಿಗೆ ಲಘುನ್ಯಾಸ ಪೂರ್ವಕ, 7 ಗಂಟೆಗೆ ರುದ್ರಹೋಮ, ಜಯಾದಿ ಹೋಮ ನಂತರ ಮಹಾ ಪೂರ್ಣಾಹುತಿ, ರಾಜೋಪಚಾರ ಸಹಿತ ಮಂಗಳಾರತಿ ನಡೆಯಲಿದೆ. ಈ ಎಲ್ಲ ಪೂಜಾ ಕಾರ್ಯಕ್ರಮಗಳನ್ನು ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ವಿದ್ವಾನ್ ಬಿ.ಬಿ.ರುದ್ರಪ್ಪ ಶಾಸ್ತ್ರಿಗಳು ಮತ್ತು ತಂಡದವರಿಂದ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಬಿ.ಪಿ.ಶಿವಕುಮಾರ್ ಕೋರಿದ್ದಾರೆ.