ಸುಂಟಿಕೊಪ್ಪ ಜ.22 NEWS DESK : ಸಂತ ಸೆಬಾಸ್ಟಿನ್ ದೇವಾಲಯದ ವಾರ್ಷಿಕ ಮಹೋತ್ಸವವು ಜ.24 ರಿಂದ 26 ರವರೆಗೆ ನಡೆಯಲಿದೆ ಎಂದು ದೇವಾಲಯದ ಧರ್ಮಗುರುಗಳಾದ ರೆ.ಫಾದರ್ ಸೆಬಾಸ್ಟಿನ್ ಪೂವತ್ತಿಗಲ್ ತಿಳಿಸಿದ್ದಾರೆ. ಸಂತ ಸೆಬಾಸ್ಟಿನ್ ವಾರ್ಷಿಕೋತ್ಸವದ ಅಂಗವಾಗಿ ಜ.23 ರವರೆಗೆ ಸಂಜೆ 5 ಗಂಟೆಗೆ ದಿವ್ಯ ಬಲಿಪೂಜೆ, ನೊವೆನಾ ಪರಮಪ್ರಸಾದದ ಆರಾಧನೆ, ಅಂಬು ಕಾಣಿಕೆ, ಹರಕೆಯ ಮಧ್ಯಸ್ಥಿಕೆ, ಪ್ರಾರ್ಥನೆ ಹಾಗೂ ರೋಗಿಗಳಿಗಾಗಿ ವಿಶೇಷ ಪ್ರಾರ್ಥನೆ ನೆರವೇರಲಿದೆ. ಜ.24 ರಂದು ಸಂಜೆ 4.30 ಗಂಟೆಗೆ ದೇವಾಲಯದ ಧರ್ಮಗುರುಗಳಾದ ರೆ.ಫಾದರ್ ಸೆಬಾಸ್ಟಿನ್ ಪೂವತ್ತಿಗಲ್ ಧ್ವಜಾರೋಹಣ ನೇರವೇರಿಸಲಿದ್ದು, 4.45ಕ್ಕೆ ದಿವ್ಯ ಬಲಿಪೂಜೆ ಹಾಗೂ ಸಂಜೆ 6 ಗಂಟೆಗೆ ಸಮಾಧಿ ಸಂದರ್ಶನ, ಮೃತರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು. ಜ.25 ರಂದು ಸಂಜೆ 5 ಗಂಟೆಗೆ ಹಬ್ಬದ ಪೂರ್ವಕ ದಿವ್ಯ ಬಲಿಪೂಜೆ, ಪರಮಪ್ರಸಾದದ ಆರಾಧನೆ, ನೊವೇನಾ ಹಾಗೂ 6.15ಕ್ಕೆ ವಾಹನಗಳ ಪೂಜೆಯನ್ನು ಮೈಸೂರು ಕ್ರೈಸ್ಟ್ ಕಾಲೇಜಿನ ಪ್ರಾಂಶುಪಾಲರಾದ ವಂ.ಪಾ.ಜಿಂಟೋ ಇಂಜಿಕಾಲಾಯಿಲ್ ನೇರವೇರಿಸಲಿದ್ದಾರೆ. ಜ.26 ರಂದು ಸಂಜೆ 5 ಗಂಟೆಗೆ ದಿವ್ಯ ಬಲಿಪೂಜೆಯನ್ನು ತಲಚೇರಿಯ ಮಹಾಧರ್ಮ ಪ್ರಾಂತ್ಯದ ವಂ.ಫಾ. ಜಿತಿನ್ ವಯಲಿಂಗಲ್ ನೇರವೇರಿಸದಲಿದ್ದು, ಸಂಜೆ 6.45ಕ್ಕೆ ದೀಪಾಲಂಕೃತ ಮಂಟಪದಲ್ಲಿ ಮೆರವಣಿಗೆ ನಡೆಯಲಿದೆ. ರಾತ್ರಿ 8 ಗಂಟೆಗೆ ಸ್ನೇಹ ಭೋಜನ 8.30ಕ್ಕೆ ಹರಕೆ ಹರಾಜು ನಡೆಯಲಿದ್ದು, ಭಕ್ತಾಧಿಗಳು ಸಂತ ಸೆಬಾಸ್ಟಿನ್ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಧರ್ಮಗುರುಗಳಾದ ರೆ.ಫಾದರ್ ಸೆಬಾಸ್ಟಿನ್ ಪೂವತ್ತಿಗಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.