ಸುಂಟಿಕೊಪ್ಪ ಜ.22 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ದೀಪ ಕಾರ್ಯಕ್ರಮದಡಿಯಲ್ಲಿ ಸುಂಟಿಕೊಪ್ಪ ವಲಯ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ 43 ಬೆಂಚ್, ಡೆಸ್ಕ್‍ಗಳನ್ನು ಕೊಡುಗೆಯಾಗಿ ನೀಡಲಾಯಿತು. ಸುಂಟಿಕೊಪ್ಪ ವಲಯದ ಸರಕಾರಿ ಪ್ರೌಢಶಾಲೆ, ಸಂತಮೇರಿ ಆಂಗ್ಲ ಸಮೂಹ ಮಾಧ್ಯಮ ಶಾಲೆ, ಕಾನ್‍ಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಿಗೆ ಜ್ಞಾನ ದೀಪ ಕಾರ್ಯಕ್ರಮದಡಿಯಲ್ಲಿ ಶೇ.80ರ ಸಹಾಯಧನ ಹಾಗೂ ಶೇ.20 ಸಹಾಯಧನವನ್ನು ನಾಕೂರು ಶಿರಂಗಾಲ ಗ್ರಾಮದ ದಾನಿಗಳಾದ ಕಾಫಿಬೆಳೆಗಾರರಾದ ಚೆಪ್ಪುಡಿರ ಅಯ್ಯಣ್ಣ, ಅಯ್ಯಪ್ಪ, ಪ್ರಿನ್ಸ್ ಚಂಗಪ್ಪ, ಪೊನ್ನಣ್ಣ, ಕಾರ್ಯಪ್ಪ ಅವರ ಸಹಕಾರದಿಂದ ಶಾಲಾ ಮಕ್ಕಳಿಗೆ ಬೇಕಾದ ಡೆಸ್ಕ್ ಬೆಂಚ್‍ಗಳನ್ನು ವಿತರಿಸಿದರು. ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕಿ ಭವ್ಯ ಹಾಗೂ ಸೇವಾ ಪ್ರತಿನಿಧಿ ಯಶೋಧ ಬಸವರಾಜ್ ಇದ್ದರು.