
ಮಡಿಕೇರಿ ಜ.25 NEWS DESK : ಕರ್ನಾಟಕ ಮಹಿಳಾ ಹಾಕಿ ತಂಡಕ್ಕೆ ನಿಡ್ಯಮಲೆ ದಿಶಾ ಆಯ್ಕೆಯಾಗಿದ್ದಾಳೆ. ಜ.28ರಂದು ಜಾರ್ಖಂಡ್ ನ ರಾಂಚಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಮೂಲತಃ ಭಾಗಮಂಡಲ ನಿವಾಸಿಯಾಗಿರುವ ದಿಶಾ, ದಿನೇಶ್ ಮತ್ತು ಸುಲೋಚನಾ ದಂಪತಿಯ ಪುತ್ರಿ. ಕೂಡಿಗೆಯ ಕ್ರೀಡಾ ಶಾಲೆಯಲ್ಲಿ ವಿದ್ಯಾಭ್ಯಾಸ ಮತ್ತು ತರಬೇತಿ ಪಡೆದಿದ್ದು, ಪ್ರಸ್ತುತ ಮೈಸೂರಿನ ಟೆರೇಶಿಯನ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ತರಬೇತುದಾರರಾದ ಸುಂದರೇಶ್ ಹಾಗೂ ಅಶ್ವಿನಿ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.









