ನಾಪೋಕ್ಲು ಜ.24 NEWS DESK : ನಾಪೋಕ್ಲು ನಾಡು ಗ್ರಾಹಕರ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿದ ಎಲ್ಲಾ 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾಹಕರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಕುಲ್ಲೇಟಿರ ಎಂ.ಅರುಣ, ನಾಯಕಂಡ ಟಿ.ಮುತ್ತಪ್ಪ, ಪಟ್ರಪಂಡ ಎ.ಮುದ್ದಪ್ಪ, ಬೊಟ್ಟೋಳಂಡ ಕೆ.ಕುಟ್ಟಪ್ಪ, ಬೊಟ್ಟೋಳಂಡ ಎ.ಪೊನ್ನಯ್ಯ, ಕೊಂಬಂಡ ಕೆ.ಗಣೇಶ್, ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಹೆಚ್.ಎ.ಬೊಳ್ಳು ಆಯ್ಕೆಯಾಗಿದ್ದಾರೆ. ಮಹಿಳಾ ಸದಸ್ಯರ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೇಟೋಳಿರ ಗಣಪತಿ ಮುತ್ತಮ್ಮ, ನಾಟೋಳಂಡ ಕಸ್ತೂರಿ ಉತ್ತಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಪಾಡಿಯಮ್ಮನ ಎ.ಮಹೇಶ್ ಹಾಗೂ ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರದಿಂದ ಕೆಲೇಟಿರ ಟಿ.ಗಣಪತಿ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಾಳುಗಳಾಗಿ ನಾಮಪತ್ರ ಸಲ್ಲಿಸಲಾಗಿದ್ದ ಮಾಚೇಟ್ಟಿರ ಕುಸು ಕುಶಾಲಪ್ಪ. ಚೋಕಿರ ಪೂವಪ್ಪ, ಮಹಮ್ಮದ್ ಆಲಿ, ಕೊಂಬಂಡ ಸೀತಾರಾಮ ನಾಮಪತ್ರ ಹಿಂಪಡೆದುಕೊಂಡ ಕಾರಣ 11 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಸಂಘದಲ್ಲಿ ಸದಸ್ಯರೇ ಇಲ್ಲದ ಕಾರಣ 12 ಸದಸ್ಯರಲ್ಲಿ 11 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಸಂಘದ ರಿಟರ್ನಿಂಗ್ ಆಫೀಸರ್ ಪಿ.ಎಸ್.ಪ್ರದೀಪ್ ಕುಮಾರ್ ಚುನಾವಣಾ ಅಧಿಕಾರಿಯಾಗಿ ಭಾಗವಹಿಸಿದ್ದು, ಸಂಘದ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ತಿಮ್ಮಯ್ಯ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.