ಮಡಿಕೇರಿ NEWS DESK ಜ.26 : ಕೊಡಗು ಹಿತರಕ್ಷಣಾ ವೇದಿಕೆ ವತಿಯಿಂದ ಮಡಿಕೇರಿ ನಗರದ ವಿಶ್ವಮಾನವ ಉದ್ಯಾನವನದಲ್ಲಿ 76ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ವೇದಿಕೆಯ ಅಧ್ಯಕ್ಷ ರವಿ ಗೌಡ ಅವರು ಕುವೆಂಪು ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ಸಮಾಜ ಸೇವಕ ಜಾನ್ಸನ್ ಅವರು ಧ್ವಜಾರೋಹಣ ನೆರವೇರಿಸಿದರು. ಮಡಿಕೇರಿ ತಾಲೂಕು ಅಧ್ಯಕ್ಷ ನಾಗೇಶ್, ಉಪ ಕಾರ್ಯದರ್ಶಿ ಅಕ್ಷಿತ್, ಮಡಿಕೇರಿ ನಗರ ಅಧ್ಯಕ್ಷ ಭರತ್, ಮಹಿಳಾ ಘಟಕದ ಕಾರ್ಯದರ್ಶಿ ಪೂರ್ಣಿಮಾ, ನಿರ್ದೇಶಕಿ ಲಿಲ್ಲಿಗೌಡ ಹಾಗೂ ಸದಸ್ಯರು ಹಾಜರಿದ್ದರು.