


ವಿರಾಜಪೇಟೆ ಜ.27 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಡೆಸ್ಕ್ ಬೆಂಚು ವಿತರಣಾ ಕಾರ್ಯಕ್ರಮದಡಿಯಲ್ಲಿ, ಮೂರ್ನಾಡು ಸರಕಾರಿ ಪ್ರೌಢಶಾಲೆಗೆ ಡೆಸ್ಕ್-ಬೆಂಚ್ ಮಂಜುರಾಗಿದ್ದು, ಮಡಿಕೇರಿ ತಾಲ್ಲೂಕಿನ ನಿವೃತ್ತ ಪೊಲೀಸ್ ಅಧಿಕಾರಿ (ಪಿಎಸ್‍ಐ)ಸದಾಶಿವ ಹಾಗೂ ಮೂರ್ನಾಡು ಪಂಚಾಯಿತಿ ಅಧ್ಯಕ್ಷ ಕುಶನ್ ರೈ ಶಾಲೆಗೆ ಡೆಸ್ಕ್ ಬೆಂಚ್ ವಿತರಿಸಿದರು. ಈ ಸಂದರ್ಭ ಮಾತನಾಡಿದ ನಿವೃತ್ತ ಪಿಎಸ್‍ಐ ಸದಾಶಿವ, ಸರಕಾರಿ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ಹೆಚ್ಚಿನವರು ಮಧ್ಯಮ ವರ್ಗದವರಾಗಿರುತ್ತಾರೆ. ಶಾಲೆಗಳಿಗೆ ಪೀಠೋಪಕರಣ ನೀಡಿರುವುದರಿಂದ ಅವರ ಕಲಿಕಾ ವ್ಯವಸ್ಥೆಗೆ ಸಹಕಾರಿವಾಗಲಿದೆ ಎಂದರು. ಮನೆಯಲ್ಲಿ ಆರ್ಥಿಕವಾಗಿ ಬಡತನ ಇದ್ದರು ಕಲಿಕೆಯಲ್ಲಿ ಬಡತನ ಇರಬಾರದು, ಒಳ್ಳೆಯ ವಿದ್ಯಾವಂತರಾಗಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಸರಕಾರಿ ಕೆಲಸಗಳನ್ನು ಅಲಂಕರಿಸಿ ದೇಶಕ್ಕೆ ಮಾದರಿಯಾಗಿ ಬಾಳಬೇಕೆಂದರು. ಕಾರ್ಯಕ್ರಮದಲ್ಲಿ ಮೇಲ್ವಿಚಾರಕರಾದ ಪ್ರತಾಪ್ ದೇವಾಡಿಗ, ಕೃಷಿ ಮೇಲ್ವಿಚಾರಕರಾದ ವಸಂತ, ಶಾಲೆಯ ಮುಖ್ಯ ಶಿಕ್ಷಕ ಗುರುರಾಜ್, ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ರಮ್ಯ, ಸೇವಾ ಪ್ರತಿನಿಧಿ ಶಿವಾನಂದ, ದಿವ್ಯ, ಶಾಲೆಯ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಈ ಆರ್ಥಿಕ ವರ್ಷದಲ್ಲಿ ವರ್ಷದಲ್ಲಿ ವಿರಾಜಪೇಟೆ ತಾಲ್ಲೂಕಿನ 21 ಶಾಲೆಗಳಿಗೆ 13,39,600 ರೂಪಾಯಿ ಮೌಲ್ಯದ 197 ಜೊತೆ ಡೆಸ್ಕ್-ಬೆಂಚುಗಳನ್ನು ಕ್ಷೇತ್ರದ ವತಿಯಿಂದ ಮಂಜೂರಾತಿಯಾಗಿದ್ದು, ಮೂರ್ನಾಡು ವಲಯದ 4 ಶಾಲೆಗಳಿಗೆ 35 ಡೆಸ್ಕ್-ಬೆಂಚುಗಳು ಮಂಜೂರಾಗಿರುತ್ತದೆ ಎಂದು ಈ ಸಂದರ್ಭ ಯೋಜನಾಧಿಕಾರಿ ಮಾಹಿತಿ ನೀಡಿದರು.









