Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಹೋಂಸ್ಟೇಯಲ್ಲಿ ಜೂಜಾಟ: 11 ಲಕ್ಷ ರೂ. ನಗದು ಸಹಿತ 28 ಮಂದಿ ಪೊಲೀಸ್ ವಶ*
  • *ಕೊಡವ ಭಾಷಿಕ ಜನಾಂಗದವರನ್ನು ಕಡೆಗಣಿಸಿದರೆ ತೀವ್ರ ಹೋರಾಟ : ಕೊಡವ ಭಾಷಿಕ ಸಮುದಾಯಗಳ ಕೂಟದ ಮಹಾಸಭೆಯಲ್ಲಿ ನಿರ್ಧಾರ*
  • *ಮಡಿಕೇರಿ ಬ್ರೈನೋಬ್ರೈನ್ ಕೇಂದ್ರದಿಂದ ಸಂಭ್ರಮದ ಪದವಿ ಪ್ರದಾನ ಸಮಾರಂಭ*
  • *ಕೊಡವರ ಭವಿಷ್ಯಕ್ಕೆ ಮಾರಕವಾಗಿರುವ ಟೌನ್‌ಶಿಪ್ ಮತ್ತು ರೆಸಾರ್ಟ್ ಗಳ ತೆರವಿಗೆ ಆಗ್ರಹ : ಜು.10 ರಂದು ಸಿಎನ್‌ಸಿ ಸತ್ಯಾಗ್ರಹ*
  • *ಜಾಗೃತ ಸಮಾಜ ನಿರ್ಮಾಣದಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದು*
  • *ಶಾಸಕ ಎ.ಎಸ್.ಪೊನ್ನಣ್ಣಗೆ ಸಚಿವ ಸ್ಥಾನ : ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ ನಿಯೋಗದಿಂದ ಮುಖ್ಯಮಂತ್ರಿಗಳಿಗೆ ಮನವಿ*
  • *ಸುಂಟಿಕೊಪ್ಪ ಅಭಿವೃದ್ಧಿಗೆ ಕ್ರಮ : ಶಾಸಕ ಡಾ.ಮಂತರ್ ಗೌಡ*
  • *ಜು.2 ರಂದು ಡಾ.ಫ.ಗು.ಹಳಕಟ್ಟಿಯವರ ಜನ್ಮದಿನ :  ‘ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ’*
  • *ಮಡಿಕೇರಿ : ನಿವೃತ್ತ ಅಧಿಕಾರಿ ಎಸ್.ಹೊನ್ನೇಗೌಡ ಅವರಿಗೆ ಆತ್ಮೀಯ ಬೀಳ್ಕೊಡುಗೆ*
  • *ಭಾಗಮಂಡಲ : ಇವಿಎಂ ಮೂಲಕ ಕಾಲೇಜು ಸಂಸತ್ತು ಚುನಾವಣೆ : ನೂತನ ಪದಾಧಿಗಳ ಆಯ್ಕೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡವ ಭಾಷಿಕ ಜನಾಂಗದವರನ್ನು ಕಡೆಗಣಿಸಿದರೆ ತೀವ್ರ ಹೋರಾಟ : ಕೊಡವ ಭಾಷಿಕ ಸಮುದಾಯಗಳ ಕೂಟದ ಮಹಾಸಭೆಯಲ್ಲಿ ನಿರ್ಧಾರ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡವ ಭಾಷಿಕ ಜನಾಂಗದವರನ್ನು ಕಡೆಗಣಿಸಿದರೆ ತೀವ್ರ ಹೋರಾಟ : ಕೊಡವ ಭಾಷಿಕ ಸಮುದಾಯಗಳ ಕೂಟದ ಮಹಾಸಭೆಯಲ್ಲಿ ನಿರ್ಧಾರ*

ಜುಲೈ 1, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಜು.1 : ಕೊಡವ ಭಾಷಾ ಸಂಸ್ಕೃತಿ, ಸಂಪ್ರದಾಯಗಳ ಮೂಲ ತಾಯಿ ಬೇರಿನಂತಿರುವ ಕೊಡವ ಭಾಷಿಕ ಜನಾಂಗದವರನ್ನು ಹಲವಾರು ವರ್ಷಗಳಿಂದ ಸರಕಾರ ಹಾಗೂ ಜನಪ್ರತಿನಿಧಿಗಳು ತಾತ್ಸಾರ ಮನೋಭಾವನೆಯಿಂದ ಕಾಣುತ್ತಿದ್ದಾರೆ ಎಂದು ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಕೊಡವ ಭಾಷಿಕ ಸಮುದಾಯಗಳ ಕೂಟದ 2025- 26 ನೇ ಸಾಲಿನ ಮಹಾಸಭೆ ಮೂರ್ನಾಡು ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು. ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತೀರಾ ಹಿಂದುಳಿದ ಮೂಲ ನಿವಾಸಿ ಜನಾಂಗದವರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಆಡಳಿತ ವ್ಯವಸ್ಥೆ ವಿಫಲತೆಯನ್ನು ಕಾಣುತ್ತಿದೆ. ಕೊಡವ ಭಾಷಿಕ ಜನಾಂಗದವರನ್ನು ಕೇವಲ ಮತ ಬ್ಯಾಂಕ್ ಗಾಗಿ ಬಳಸಿಕೊಳ್ಳುತ್ತಿರುವುದು ವಿಪರ್ಯಾಸ ಎಂದರು. ಶಾಶ್ವತ ನೆಲೆ ಕಂಡುಕೊಳ್ಳುವುದು ಕೊಡವ ಭಾಷಿಕ ಜನಾಂಗದವರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ. ಜಾಗವನ್ನು ಗುರುತಿಸಿ ಸಂಬAಧಿಸಿದ ಸರಕಾರ ಮತ್ತು ಜಿಲ್ಲಾಡಳಿತÀಕ್ಕೆ ಮನವಿ ಸಲ್ಲಿಸಿದರೂ ಇಲ್ಲಿಯವರೆಗೆ ಮಂಜೂರು ಮಾಡಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು. ಜನಾಂಗದ ಪ್ರಮುಖರಾದ ಕೋಲೆಯಂಡ ಡಾ.ಮೋಹನ್ ಅಪ್ಪಾಜಿ, ಅಂಬಾಡಿರ ಕಾರ್ಯಪ್ಪ, ಕುಡಿಯರ ಮುತ್ತಪ್ಪ, ವಾಸುದೇವ್, ಪ್ರಭುಕುಮಾರ್, ಬಿದ್ದಪ್ಪ ಮುಂತಾದವರು ಮಾತನಾಡಿ ಶಾಶ್ವತ ಜಾಗವನ್ನು ಪಡೆಯಲು ಕೂಟದೊಂದಿಗೆ ಜನಾಂಗ ಬಾಂಧವರು ಸಂಪೂರ್ಣ ಸಹಕಾರ ನೀಡಲಿದ್ದೇವೆ. ಜನಾಂಗದ ಸ್ವಾಭಿಮಾನಕ್ಕೆ ದಕ್ಕೆ ಬರುವಂತಹ ಯಾವುದೇ ಸಮಸ್ಯೆ ಎದುರಾದರೂ ಕೂಟದ ಮೂಲಕ ಹೋರಾಟಕ್ಕೆ ಮುಂದಾಗಬೇಕು. ಪ್ರತಿಷ್ಠೆಯನ್ನು ಬದಿಗೊತ್ತಿ ಎಲ್ಲರೂ ಒಗ್ಗಟ್ಟಾಗಿ ಬೀದಿಗಿಳಿದು ಹೋರಾಟ ಮಾಡಲು ಸಭೆ ಬೆಂಬಲ ಸೂಚಿಸಿತು. ಶಾಶ್ವತ ಜಾಗದ ವಿಚಾರದಲ್ಲಿ ತೀವ್ರ ಹೋರಾಟ ನಡೆಸುವುದಲ್ಲದೆ, ಮುಂದಿನ ಸಂದರ್ಭಗಳನ್ನು ಅವಲೋಕಿಸಿ ಸ್ಥಳೀಯ ಪಂಚಾಯ್ತಿ ಚುನಾವಣೆಗಳನ್ನು ಬಹಿಷ್ಕರಿಸಲು ಸಭೆ ನಿರ್ಣಯ ಕೈಗೊಂಡಿತು. ಸರ್ವ ಸದಸ್ಯರ ಅಭಿಪ್ರಾಯದಂತೆ ಇದೀಗ ಕಾರ್ಯನಿರ್ವಹಿಸುತ್ತಿರುವ ಕೂಟದ ಕಾರ್ಯಕಾರಿ ಮಂಡಳಿಯನ್ನು ಮೂರು ವರ್ಷಗಳಿಂದ ಮುಂದಿನ 5 ವರ್ಷಗಳ ವರೆಗೆ ಮುಂದುವರೆಸುವoತೆಯೂ ಮತ್ತು ಯಾವುದೇ ಒಡಕು ಬಾರದಂತೆ ಜನಾಂಗ ಬಾಂಧವರು ಒಗ್ಗಟ್ಟಿನಿಂದ ಇರುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು. ಅಂಗಾoಗ ದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾದ ಪಣಿಕ ಜನಾಂಗದ ದಿ.ಡಾಲು ಉತ್ತಯ್ಯ ಅವರ ತ್ಯಾಗವನ್ನು ಸ್ಮರಿಸಿ ಅವರ ಪತ್ನಿ ರಾಜೇಶ್ವರಿ (ರಾಜಿ) ಅವರನ್ನು ಕೂಟದ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕೂಟದ ಗೌರವ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ಅವರು ಸ್ವಾಗತಿಸಿ ಕಳೆದ ಸಾಲಿನ ಮಹಾಸಭೆಯ ಸಮಗ್ರ ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಿದರು. ಸಭೆಯಲ್ಲಿ ಮೃತ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು. 2025-26 ನೇ ಸಾಲಿನ ಆಡಳಿತ ಮಂಡಳಿಯ ವರದಿಯನ್ನು ಕೂಟದ ನಿರ್ದೇಶಕ ಕೋಲೆಯಂಡ ಗಿರೀಶ್ ವಾಚಿಸಿದರು. ಖಜಾಂಚಿ ಪಡಿಞರಂಡ ಪ್ರಭು ಕುಮಾರ್ ನಿರೂಪಿಸಿದರು, ಅಪ್ಪಚ್ಚಂಡ ತ್ರಿಶ ಪ್ರಾರ್ಥಿಸಿದರು. ಇದೇ ಪ್ರಥಮ ಬಾರಿಗೆ ಆಯೋಜಿಸಲ್ಪಟ್ಟಿದ್ದ ಕೊಡವ ಭಾಷಿಕ ಜನಾಂಗದ ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದವರಿಗೆ ಸಭೆಯಲ್ಲಿ ಕೃತಜ್ಞತೆ ಸಲ್ಲಿಸಲಾಯಿತು. ಉಪಾಧ್ಯಕ್ಷರಾದ ನೆರೆಯಂಡಮoಡ ಉಮಾಪ್ರಭು, ಪೊನ್ನಿರ ಗಗನ್, ಕುಡಿಯರ ಬೋಪಯ್ಯ, ಕಾರ್ಯದರ್ಶಿ ಪಟ್ಟಚಾರಿರ ದಿನೇಶ್ ಕಾರ್ಯಪ್ಪ, ಬಾಳೆಕುಟ್ಟಂಡ ಉದಯ ಮಾದಪ್ಪ, ನಿರ್ದೇಶಕರಾದ ಪೊಟ್ಟಂಡ ಗಣೇಶ್, ವೇದಪಂಡ ಕಿರಣ್, ಪಾತಂಡ ಸಂತೋಷ್, ಬೀಕಚಂಡ ಬೆಳ್ಯಪ್ಪ, ಮೇವಾಟಿರ ಮುತ್ತಣ್ಣ, ಕಾಪಾಳ ಮಿಲನ್, ತೋರೆರ ಕಾಶಿ ಕಾರ್ಯಪ್ಪ, ಪೊನ್ನಜ್ಜಿರ ತಂಜನ್, ಕಣಿಯರ ಪ್ರಕಾಶ್, ಚೋಕಿರ ಬಾಬಿ ಭೀಮಯ್ಯ, ಮೇದರ ಚಂದ್ರ, ಮಾರಂಗಿ ಮನು, ಜೋಕಿರ ಜೀವನ್, ಇಗ್ಗುಡ ಗಣಪತಿ, ಅರಮನೆ ಪಾಲೆ ದೇವಯ್ಯ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಹೋಂಸ್ಟೇಯಲ್ಲಿ ಜೂಜಾಟ: 11 ಲಕ್ಷ ರೂ. ನಗದು ಸಹಿತ 28 ಮಂದಿ ಪೊಲೀಸ್ ವಶ*

ಜುಲೈ 1, 2026

*ಮಡಿಕೇರಿ ಬ್ರೈನೋಬ್ರೈನ್ ಕೇಂದ್ರದಿಂದ ಸಂಭ್ರಮದ ಪದವಿ ಪ್ರದಾನ ಸಮಾರಂಭ*

ಜುಲೈ 1, 2026

*ಕೊಡವರ ಭವಿಷ್ಯಕ್ಕೆ ಮಾರಕವಾಗಿರುವ ಟೌನ್‌ಶಿಪ್ ಮತ್ತು ರೆಸಾರ್ಟ್ ಗಳ ತೆರವಿಗೆ ಆಗ್ರಹ : ಜು.10 ರಂದು ಸಿಎನ್‌ಸಿ ಸತ್ಯಾಗ್ರಹ*

ಜುಲೈ 1, 2026

*ಕೊಡವ ಭಾಷಿಕ ಜನಾಂಗದವರನ್ನು ಕಡೆಗಣಿಸಿದರೆ ತೀವ್ರ ಹೋರಾಟ : ಕೊಡವ ಭಾಷಿಕ ಸಮುದಾಯಗಳ ಕೂಟದ ಮಹಾಸಭೆಯಲ್ಲಿ ನಿರ್ಧಾರ*

ಜುಲೈ 1, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಜು.1 : ಕೊಡವ ಭಾಷಾ ಸಂಸ್ಕೃತಿ, ಸಂಪ್ರದಾಯಗಳ ಮೂಲ ತಾಯಿ ಬೇರಿನಂತಿರುವ ಕೊಡವ ಭಾಷಿಕ ಜನಾಂಗದವರನ್ನು…

*ಮಡಿಕೇರಿ ಬ್ರೈನೋಬ್ರೈನ್ ಕೇಂದ್ರದಿಂದ ಸಂಭ್ರಮದ ಪದವಿ ಪ್ರದಾನ ಸಮಾರಂಭ*

ಜುಲೈ 1, 2026

*ಕೊಡವರ ಭವಿಷ್ಯಕ್ಕೆ ಮಾರಕವಾಗಿರುವ ಟೌನ್‌ಶಿಪ್ ಮತ್ತು ರೆಸಾರ್ಟ್ ಗಳ ತೆರವಿಗೆ ಆಗ್ರಹ : ಜು.10 ರಂದು ಸಿಎನ್‌ಸಿ ಸತ್ಯಾಗ್ರಹ*

ಜುಲೈ 1, 2026

*ಜಾಗೃತ ಸಮಾಜ ನಿರ್ಮಾಣದಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದು*

ಜುಲೈ 1, 2026

*ಶಾಸಕ ಎ.ಎಸ್.ಪೊನ್ನಣ್ಣಗೆ ಸಚಿವ ಸ್ಥಾನ : ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ ನಿಯೋಗದಿಂದ ಮುಖ್ಯಮಂತ್ರಿಗಳಿಗೆ ಮನವಿ*

ಜುಲೈ 1, 2026

*ಸುಂಟಿಕೊಪ್ಪ ಅಭಿವೃದ್ಧಿಗೆ ಕ್ರಮ : ಶಾಸಕ ಡಾ.ಮಂತರ್ ಗೌಡ*

ಜುಲೈ 1, 2026

*ಜು.2 ರಂದು ಡಾ.ಫ.ಗು.ಹಳಕಟ್ಟಿಯವರ ಜನ್ಮದಿನ :  ‘ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ’*

ಜುಲೈ 1, 2026

*ಮಡಿಕೇರಿ : ನಿವೃತ್ತ ಅಧಿಕಾರಿ ಎಸ್.ಹೊನ್ನೇಗೌಡ ಅವರಿಗೆ ಆತ್ಮೀಯ ಬೀಳ್ಕೊಡುಗೆ*

ಜುಲೈ 1, 2026

*ಭಾಗಮಂಡಲ : ಇವಿಎಂ ಮೂಲಕ ಕಾಲೇಜು ಸಂಸತ್ತು ಚುನಾವಣೆ : ನೂತನ ಪದಾಧಿಗಳ ಆಯ್ಕೆ*

ಜುಲೈ 1, 2026

*ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಸಾಗಾಣಿಕೆ ವಿರೋಧಿ ದಿನ ಆಚರಣೆ : ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ*

ಜುಲೈ 1, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.