

ವಿರಾಜಪೇಟೆ ಜ.27 NEWS DESK : ಕೇರಳದ ಬೈತೂರು ಉತ್ಸವ ಹಿನ್ನೆಲೆ ವಿರಾಜಪೇಟೆಯಿಂದ ಬೈತೂರಪ್ಪ ದೇವಸ್ಥಾನಕ್ಕೆ ಮೂವರು ಯುವಕರು ಮೂರನೇ ವರ್ಷವೂ ಪಾದಯಾತ್ರೆ ಮಾಡಿ ಗಮನ ಸೆಳೆದರು. ಭಕ್ತರಾಗಿರುವ ಚೆಟ್ಟೋಳಿರ ಶರತ್ ಸೋಮಣ್ಣ, ಮುರುವಂಡ ಸವನ್ ಸೋಮಣ್ಣ, ಕಾಳಮಂಡ ರಾಬಿನ್ ಅಚ್ಚಮ್ಮ ಪಾದಯಾತ್ರೆ ನಡೆಸಿದ ಯುವಕರು. ಜ.22ರ ಮುಂಜಾನೆ ವಿರಾಜಪೇಟೆಯಿಂದ ಪಾದಯಾತ್ರೆ ಪ್ರಾರಂಭಿಸಿದ ಇವರು ಪೆರುಂಬಾಡಿ, ಮಾಕುಟ್ಟ, ಕೂಟುಪೊಳೆ, ಹುಲಿಕಲ್ ಮೂಲಕ ಪಾದಯಾತ್ರೆ ಮಾಡಿ ಸುಮಾರು 40 ಕಿ.ಮಿ ಕ್ರಮಿಸಿ ದೇವಾಲಯ ತಲುಪಿದರು. ನಂತರ ನಾಲ್ಕುದಿನಅಲ್ಲೇ ಕೆಲಸ ಕಾರ್ಯ ನಿರ್ವಹಿಸಿ, ವಿರಾಜಪೇಟೆಗೆ ಹಿಂತಿರುಗಿ ಪ್ರಸಾದ ವಿತರಿಸಿದರು.







