ವಿರಾಜಪೇಟೆ ಜ.27 NEWS DESK : ವಿಶ್ವದಾದ್ಯಂತ ಅನೇಕ ದೇಶಗಳಿದ್ದರು ಇಂದು ಭಾರತ ದೇಶದ ಸಂವಿಧಾನವು ಉತ್ಕೃಷ್ಟವಾದ ಸಂವಿಧಾನ, ಪ್ರಜಾಪ್ರಭುತ್ವ ಹೊಂದಿರುವ ಗಣತಂತ್ರ ದೇಶವಾಗಿದೆ ಎಂದು ವಕೀಲರಾದ ಪುಷ್ಪರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು. ವಿರಾಜಪೇಟೆ ಜೈ ಭಾರತ್ ಆಟೋ ಚಾಲಕರು ಮತ್ತು ಮಾಲೀಕರ ಸಂಘ ವತಿಯಿಂದ ಸಂಘದ ಕಚೇರಿಯಲ್ಲಿ 76ನೇ ಗಣರಾಜ್ಯೋತ್ಸವ ಆಚರಿಸಲಾಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂಘದ ಕಾನೂನು ಸಲಹೆಗಾರರಾದ ವಕೀಲ ಪುಷ್ಪರಾಜ್, 1950ರಲ್ಲಿ ಸಂವಿಧಾನ ರಚನೆಗೊಂಡು ಅಂಗೀಕಾರವಾದ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸುಲಾಗುತ್ತಿದೆ. ಸಮಾನತೆ, ಪ್ರಜಾಪ್ರಭುತ್ವ, ಸರ್ವರಿಗೂ ಸಮಪಾಲು ಸಮಬಾಳು ಎಂಬ ತಳಹದಿಯೊಂದಿಗೆ ರಚನೆಗೊಂಡ ಸಂವಿಧಾನವನ್ನು ಎಲ್ಲಾ ವರ್ಗದವರು ಗೌರವಿಸುವಂತಾಗಬೇಕು. ಸಂವಿಧಾನದ ಮೌಲ್ಯಗಳಾದ, ಸಮಾನತೆ, ಪ್ರಜಾಪ್ರಭುತ್ವ, ಏಕತೆ ಮತ್ತು ಜಾತ್ಯಾತೀತವಾದಗಳನ್ನು ಒಳಗೊಂಡಂತೆ ರಚನೆಗೊಂಡ ಸಂವಿಧಾನವು ಇಂದು ವಿಶ್ವದಲ್ಲೇ ಅತ್ಯಂತ ಜನಪ್ರಿಯ ಹೊಂದಿರುವ ಗಣತಂತ್ರ ರಾಷ್ಟ್ರವಾಗಿ ಹೊರಹೊಮ್ಮಿದೆ. ಜನನಾಯಕವಾದ ರಾಷ್ಟ್ರದಲ್ಲಿ ನಮಗೆ ಜಾತಿ ಧರ್ಮ ಆಧರಿತವಾಗಿ ಯಾವುದೇ ರೀತಿಯ ಸಂವಿಧಾನ ರಚನೆಗೊಂಡಿಲ್ಲಾ ಬದಲಿಗೆ ಸರ್ವರು ಸಮಾನರು ಎಂಬ ಮನೋಭಾವ ದೃಷ್ಟಿಯಿಂದ ಸಂವಿಧಾನ ರಚನೆಗೊಂಡಿದೆ. ಸಂವಿಧಾನವನ್ನು ಎಲ್ಲಾ ವರ್ಗದ ಜನಾಂಗವು ಗೌರವ ಸೂಚಿಸುವಂತಾಗಬೇಕು ಎಂದು ಹೇಳಿದರು. ಕಾರ್ಯಕ್ರಮ ಉದ್ದೇಶಿಸಿ ಸಂಘದ ಮಾಜಿ ಅಧ್ಯಕ್ಷ ಎಂ.ಎನ್ ಶಿವು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬೀಕಚಂಡ ಪುಟ್ಟಬೆಳ್ಯಪ್ಪ, ಗೌರವ ಅಧ್ಯಕ್ಷ, ಮಾಜಿ ಸೈನಿಕ ತೋರೇರ ಪ್ರಭು ಕುಟ್ಟಪ್ಪ, ಪ್ರದೀಪ್ ಉಪಸ್ಥಿತರಿದ್ದರು. ಜೈ ಭಾರತ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಜೀವನ್, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಮತ್ತು ಹಿರಿಯ ಕಿರಿಯ ಸದಸ್ಯರು, ಹಾಜರಿದ್ದರು.