ಮಡಿಕೇರಿ ಜ.29 NEWS DESK : ಮಡಿಕೇರಿಯ ಮುಖ್ಯ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾದ ನವೀಕೃತ ಆವರಣವನ್ನು ಬ್ಯಾಂಕ್ ನ ಮಂಗಳೂರು ವಲಯದ ಜನರಲ್ ಮ್ಯಾನೇಜರ್ ಮತ್ತು ವಲಯ ಮುಖ್ಯಸ್ಥ ರಾಜೇಶ್ ಖನ್ನಾ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಬ್ಯಾಂಕ್ ಆಫ್ ಬರೋಡಾ ಪ್ರಸ್ತುತ ಎಸ್ ಬಿ ಐ ಹೊರತುಪಡಿಸಿದಂತೆ ದೇಶದಲ್ಲಿಯೇ ಅತ್ಯದಿಕ ವಹಿವಾಟಿನಲ್ಲಿ ಎರಡನೇ ರಾಷ್ಟ್ರೀಕೃತ ಬ್ಯಾಂಕ್ ಎಂಬ ಹಿರಿಮೆ ಹೊಂದಿದೆ. 25 ಲಕ್ಷ ಕೋಟಿ ರುಪಾಯಿ ವಹಿವಾಟು ನಡೆಸುತ್ತಿರುವ ಬ್ಯಾಂಕ್ ಆಫ್ ಬರೋಡಾ, ಗ್ರಾಹಕರ ವಿಶ್ವಾಸಾಹ೯ ಸೇವೆಗೆ ಆದ್ಯತೆ ನೀಡುತ್ತಿದೆ. ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೋಲ್ಕರ್ ನಮ್ಮ ಬ್ಯಾಂಕ್ ನ ರಾಯಬಾರಿಯಾಗಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ನಮ್ಮ ಬದ್ದತೆಯನ್ನು ಸದಾ ತೋರುತ್ತಿದ್ದೇವೆ ಎಂದರು. ಬ್ಯಾಂಕ್ ಆಫ್ ಬರೋಡಾದ ಎಜಿಎಂ ಮತ್ತು ಪುತ್ತೂರು ಕ್ಷೇತ್ರದ ಪ್ರಾದೇಶಿಕ ವ್ಯವಸ್ಥಾಪಕರಾದ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, 1946 ರಲ್ಲಿಯೇ ಮಡಿಕೇರಿಯಲ್ಲಿ ಶಾಖೆಯನ್ನು ತೆರೆಯಲಾಗಿದ್ದು, 1996 ರಿಂದ ಮುಖ್ಯರಸ್ತೆಯಲ್ಲಿ ಸ್ವಂತ ಕಟ್ಟಡದಲ್ಲಿ ಕಾಯ೯ನಿವ೯ಹಿಸುತ್ತಿರುವ ಬ್ಯಾಂಕ್, ನ ಶ್ರೆಯೋಭಿವೃದ್ಧಿಗೆ ಜಿಲ್ಲೆಯ ಜನತೆ ಸಂಪೂಣ೯ ಸಹಕಾರ ನೀಡಿದ್ದಾರೆ. ಗ್ರಾಹಕರಿಗೆ ಕಾಪೋ೯ರೇಟ್ ಗುಣಮಟ್ಟದ ಕಟ್ಟಡದಲ್ಲಿ ತೃಪ್ತಿದಾಯಕ ಬ್ಯಾಂಕಿಂಗ್ ಸೇವೆ ನೀಡುವ ಉದ್ದೇಶದಿಂದ ಈಗ ಬ್ಯಾಂಕ್ ನ್ನು ನವೀಕರಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. 116 ಸುದೀಘ೯ ವಷ೯ಗಳ ಇಕಿಹಾಸ ಹೊಂದಿ, ಭಾರತದಲ್ಲಿ 10 ಸಾವಿರ ಶಾಖೆಗಳನ್ನು ಹೊಂದಿರುವ ಬ್ಯಾಂಕ್ ಆಫ್ ಬರೋಡಾವು 24 ದೇಶಗಳಲ್ಲಿಯೂ ಕಾಯ೯ಪ್ರವೃತ್ತವಾಗಿದೆ ಎಂದು ತಿಳಿಸಿದರು. ಪುತ್ತೂರು ಕ್ಷೇತ್ರದ ಉಪ ಪ್ರಾದೇಶಿಕ ವ್ಯವಸ್ಥಾಪಕ ಹೆಚ್.ವಿ. ಭರತ್ ವೇದಿಕೆಯಲ್ಲಿದ್ದರು. ಮಡಿಕೇರಿ ಶಾಖೆಯ ಮುಖ್ಯ ವ್ಯವಸ್ಥಾಪಕ ಕೆ.ರಾಜೇಶ್ ಕುಮಾರ್ ಸ್ವಾಗತಿಸಿ, ಬ್ಯಾಂಕ್ ಅಧಿಕಾರಿ ಸರಸ್ವತಿ ವಂದಿಸಿದರು. ದೇವಿ ಪ್ರಾಥಿ೯ಸಿ, ಬಿ.ಜಿ.ಧನ್ಯ ನಿರೂಪಿಸಿದರು. ಇದೇ ಸಂದಭ೯ ಬ್ಯಾಂಕ್ ನ ಹಿರಿಯ ಗ್ರಾಹಕರು, ಮಾಜಿ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.