
ಮಡಿಕೇರಿ ಫೆ.3 NEWS DESK : ಕೊಡಗು ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ 14 ವರ್ಷ 7 ತಿಂಗಳು ಸೇವೆ ಸಲ್ಲಿಸಿ ಪ್ರಸ್ತುತ ಪೊನ್ನಂಪೇಟೆ ನ್ಯಾಯಾಲಯದಿಂದ ನಿವೃತ್ತರಾದ ಬೈಲೀಪ್ ಕೆ.ಎಂ.ಲವಕುಮಾರ್ (ಮಾಜಿ ಸೈನಿಕ) ಅವರನ್ನು ಬೀಳ್ಕೊಡುವ ಸಮಾರಂಭ ನಡೆಯಿತು. ಪೊನ್ನಂಪೇಟೆ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಪ್ರದೀಪ್ ಪೋತೆದಾರ್, ಸಿವಿಲ್ ಹಿರಿಯ ನ್ಯಾಯಾಧೀಶ ಮಂಜುನಾಥ್, ವಿರಾಜಪೇಟೆ ಮುಖ್ಯ ಆಡಳಿತಾಧಿಕಾರಿ ಗೋವಿಂದ ರಾಜು, ನಾಝರ್, ಪ್ರೀತಮ್ ಮತ್ತಿತರ ಪ್ರಮುಖರು ಲವಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸುವುದರೊಂದಿಗೆ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು. ಸಂಧ್ಯಾ ಹಾಗೂ ನೇತ್ರಾವತಿ ಪ್ರಾರ್ಥಿಸಿ, ಕವಿತಾ ನಿರೂಪಿಸಿದರು.









