
ವಿರಾಜಪೇಟೆ ಫೆ.4 NEWS DESK : ವಿರಾಜಪೇಟೆ ಪುರಸಭೆಯ ನೂತನ ಮುಖ್ಯ ಅಧಿಕಾರಿಯಾಗಿ ಪಿ.ಕೆ.ನಾಚಪ್ಪ ನೇಮಕಗೊಂಡಿದ್ದಾರೆ. ಈ ಹಿಂದೆ ವಿರಾಜಪೇಟೆ ಪುರಸಭೆಯ ಮುಖ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರ ಕುಮಾರ್ ಅವರನ್ನು ತಕ್ಷಣದಿಂದಲೇ ವರ್ಗಾವಣೆಗೊಳಿಸಿ ಈ ಸ್ಥಾನಕ್ಕೆ ಪಿ.ಕೆ.ನಾಚಪ್ಪ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.









