




ಮಡಿಕೇರಿ NEWS DESK ಫೆ.6 : ಕೊಡವರ ಹಾಗೂ ಕೊಡವ ಭಾಷಿಕರ ಹಕ್ಕುಗಳ ಪ್ರತಿಪಾದನೆಯ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆೆಯುವ ಸಲುವಾಗಿ ನಡೆಯುತ್ತಿರುವ ಕೊಡವರ ‘ಕೊಡವಾಮೆ ಬಾಳೋ’ ಪಾದಯಾತ್ರೆ 5ನೇ ದಿನವನ್ನು ಯಶಸ್ವಿಯಾಗಿ ಪೂರೈಸಿ ಜಿಲ್ಲಾ ಕೇಂದ್ರ ಮಡಿಕೇರಿ ಸಮೀಪದ ಕಗ್ಗೋಡ್ಲು-ಮೇಕೇರಿಗೆ ಆಗಮಿಸಿದೆ. ಬೇತ್ರಿ ಗ್ರಾಮದಿಂದ ಗುರುವಾರ ಬೆಳಗ್ಗೆ ಆರಂಭಗೊAಡ 5ನೇ ದಿನದ ಪಾದಯಾತ್ರೆ ಮೂರ್ನಾಡು ಪಟ್ಟಣವನ್ನು ತಲುಪಿದ ಸಂದರ್ಭ, ಮಡಿಕೇರಿ ತಾಲ್ಲೂಕು ವ್ಯಾಪ್ತಿಯ ಸಹಸ್ರಾರು ಕೊಡವ ಸಮುದಾಯ ಬಾಂಧವರು ಮುಖ್ಯ ಪಾದಯಾತ್ರೆಗೆ ಸೇರ್ಪಡೆಗೊಂಡರು. ಸಾಂಪ್ರದಾಯಿಕ ಕೊಡವ ಉಡುಪಿನಲ್ಲಿದ್ದ ಕೊಡವ ಕೊಡವತಿಯರು ಮೆರವಣಿಗೆಯ ಉದ್ದಕ್ಕೂ ಗಮನ ಸೆಳೆಯುತ್ತಿದ್ದು, ಉರಿಬಿಸಿಲ ಬೇಗೆಯ ನಡುವೆಯೂ ಪಾದಯಾತ್ರೆ ಮೂರ್ನಾಡಿನಿಂದ ಹಾಕತ್ತೂರು ಗ್ರಾಮವನ್ನು ಹಾದು ಕಗ್ಗೊಡ್ಲು-ಮೇಕೇರಿ ಗ್ರಾಮಕ್ಕೆ ಸಂಜೆ ತಲುಪಿತು. ಸುಮಾರು 13 ಕಿ.ಮೀ ಪಾದಯಾತ್ರೆ ಇಂದು ನಡೆಯಿತು. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಮತ್ತೆ ಆರಂಭಗೊಳ್ಳುವ ಪಾದಯಾತ್ರೆ ಮಡಿಕೇರಿಗೆ ಆಗಮಿಸಲಿದೆ. ಪಾದಯಾತ್ರೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತ ತಲುಪುವ ಹಂತದಲ್ಲಿ, ಕ್ರಮವಾಗಿ ಗಾಳಿಬೀಡು, ತಾಳತ್ತಮನೆ, ಕುಶಾಲನಗರ ಸುಂಟಿಕೊಪ್ಪ, ಮಕ್ಕಂದೂರು, ಸಿದ್ದಾಪುರ ಚೆಟ್ಟಳ್ಳಿ ವಿಭಾಗದಿಂದ ತಂಡಗಳು ಆಗಮಿಸಲಿವೆ. ಬಳಿಕ ಫೀ.ಮಾ.ಕಾರ್ಯಪ್ಪ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಜನರಲ್ ತಿಮ್ಮಯ್ಯ ವೃತ್ತದ ಬಳಿ ಯಾತ್ರೆ ಸೇರಲಿದೆ. ಜನರಲ್ ತಿಮ್ಮಯ್ಯ ವೃತ್ತದಲ್ಲಿ ಸಮಾಗಮವಾಗುವ ಎಲ್ಲಾ ತಂಡಗಳು ಒಟ್ಟಾಗಿ ಸೇರಿ ಮಡಿಕೇರಿಯ ಕೊಡವ ಸಮಾಜ ಮಂದ್’ನಲ್ಲಿ ಸಮಾವೇಶಗೊಳ್ಳಲಿದೆ.