ಮಡಿಕೇರಿ ಫೆ.8 NEWS DESK : 2024ರ ಆ.20 ರಿಂದ ಸೆ.22ರವರೆಗೆ ನಡೆದ ಯುವ ಕಾಂಗ್ರೆಸ್ ಆಂತರಿಕ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ 4830 ಮತಗಳನ್ನು ಪಡೆದು ಹಕೀಂ ಸುಂಟ್ಟಿಕೊಪ್ಪ ಗೆಲುವು ಸಾಧಿಸಿರುವುದರಿಂದ ಕಿಂಗ್ ಮೇಕರ್ಸ್ ತಂಡದ ಸುಂಟ್ಟಿಕೊಪ್ಪದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಲ್ಲದೇ ಹಕೀಂ ಅವರನ್ನು ಸನ್ಮಾನಿಸಿ, ವಿಶೇಷವಾಗಿ ಹಾಲಿನಭಿಷೇಕ ಮಾಡಿದರು. ಈ ಸಂದರ್ಭ ಮಾತಾನಾಡಿದ ಹಕೀಂ ನನ್ನ ಗೆಲುವು ಪ್ರತಿಯೊಬ್ಬರ ಗೆಲುವಾಗಿದೆ. ಯುವ ಕಾಂಗ್ರೆಸ್ ಆಂತರಿಕ ಚುನಾವಣೆಯಲ್ಲಿ ನನ್ನ ಗೆಲುವಿಗಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಪ್ರೀತಿಯ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ ಎಂದರು. ಈ ಸಂದರ್ಭ ಯುವ ಉದ್ಯಮಿ ಹಾಗೂ ಸಮಾಜ ಸೇವಕ ಫಾಝಿಲ್, ಕಿಂಗ್ ಮೇಕರ್ಸ್ ತಂಡದ ಗೂಡ, ಅಬ್ಬಾಸ್, ರಮ್ಮಿ, ತನ್ಸೀ, ಎಸ್.ಯು.ಐ ಜಿಲ್ಲಾ ಉಪಾಧ್ಯಕ್ಷ ಹಾರಿಸ್, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಬಶೀರ್, ರಫೀಕ್, ಸಾದಿಕ್, ಅಝರ್, ನಿಸಾರ್, ಅಮೀನ್, ಬಶೀರ್, ರಮೀಸ್ ಇದ್ದರು.











