
ಮಡಿಕೇರಿ ಫೆ.11 NEWS DESK : ಸೋಮವಾರಪೇಟೆ ಐಗೂರುನಲ್ಲಿ ನಡೆದ ಅಂಡರ್-16 ಟೂರ್ನಮೆಂಟ್‌ನಲ್ಲಿ, ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ತಂಡವು ವಿಜೇತರಾದರು. ವಿಜೇತ ತಂಡದ ಪರ ಹಾರ್ದಿಕ್ ಕರ್ಕೇರ, ಕೇವಲ 9 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮತ್ತು ಒಟ್ಟು 14 ಎಸೆತಗಳಲ್ಲಿ 74 ರನ್ ಗಳಿಸಿ ಟೂರ್ನಮೆಂಟ್‌ನ ಅತ್ಯಂತ ವೇಗದ ಅರ್ಧಶತಕದ ದಾಖಲೆಯನ್ನು ಬರೆದಿದ್ದಾರೆ. ಈ ಅದ್ಭುತ ಪ್ರದರ್ಶನಕ್ಕಾಗಿ ಅವರು ‘ಮ್ಯಾನ್ ಆಫ್ ದ ಸೀರೀಸ್’ ಪ್ರಶಸ್ತಿಯನ್ನು ಪಡೆದಿದ್ದಾರೆ. ಬೌಲಿಂಗ್‌ನಲ್ಲಿ ಪವನ್ ಮತ್ತು ಸುಮಿತ ತಲಾ 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹಾರ್ದಿಕ್ ಕರ್ಕೇರ ಮಡಿಕೇರಿಯ ಉದ್ಯಮಿ ರವಿ ಕರ್ಕೇರ ಹಾಗೂ ಮಮತ ದಂಪತಿಯ ಪುತ್ರ.









