
ಮಡಿಕೇರಿ ಫೆ.13 NEWS DESK : ನಗರದಲ್ಲಿ ಮೂರು ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಭೂಮಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಶಾಸಕರ ವಿಶೇಷ ಅನುದಾನದಲ್ಲಿ ಒಟ್ಟು ಮೂರು ಕೋಟಿ ರೂ ಗಳನ್ನು ಮಡಿಕೇರಿ ನಗರದ ಅಭಿವೃದ್ಧಿಗೆ ಮೀಸಲಿರಿಸುವುದಾಗಿ ಶಾಸಕರಾದ ಡಾ.ಮಂತರ್ ಗೌಡ ತಿಳಿಸಿದ್ದಾರೆ. ನಗರದ ಎಲ್ಲಾ ರಸ್ತೆಗಳನ್ನು ಉತ್ತಮ ಗುಣಮಟ್ಟದ ಸರ್ವಖುತು ರಸ್ತೆ ನಿರ್ಮಾಣದ ಆಶಯ ತಮ್ಮದಾಗಿದ್ದು, ಅದನ್ನು ಈಡೇರಿಸಲು ಬದ್ದನಾಗಿದ್ದೇನೆ ಎಂದು ಡಾ.ಮಂತರ್ ಗೌಡ ಅವರು ಹೇಳಿದರು. ನಗರದ ಕಾನ್ವೆಂಟ್ ಸಮೀಪ ರಸ್ತೆ, ಎಫ್.ಎಂ.ಸಿ. ಕಾಲೇಜು ಹಿಂಭಾಗದ ರಸ್ತೆ, ಮುಳಿಯ ಬಡಾವಣೆ ರಸ್ತೆ, ಮೋಣಪ್ಪ ಗ್ಯಾರೆಜ್ ರಸ್ತೆ, ಕೋಟೆ ಮಾರಿಯಮ್ಮ ದೇವಾಲಯ ಮುಂಭಾಗದ ರಸ್ತೆ, ಗೌಳಿಬೀದಿ ರಸ್ತೆ , ಬಸಪ್ಪ ಶಿಶುವಿಹಾರ ರಸ್ತೆ, ಅಬ್ದುಲ್ ಕಲಾಂ ಬಡಾವಣೆ ಮೈದಾನದ ಕಾಮಗಾರಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಏಪ್ರಿಲ್ ಅಂತ್ಯದ ವೇಳೆಗೆ ಎಲ್ಲಾ ಕಾಮಗಾರಿಗಳು ಮುಗಿಯಬೇಕು ಎಂದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು. ಆದ್ಯತೆ ಮೇರೆಗೆ ಮತ್ತಷ್ಟು ಅನುದಾನ ಒದಗಿಸುವ ಭರವಸೆ ನೀಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಮಡಿಕೇರಿ ನಗರಕ್ಕೆ ಮೂರು ಕೋಟಿ ರೂಗಳ ಬೃಹತ್ ಮೊತ್ತದ ಅನುದಾನವನ್ನು ಶಾಸಕರು ನೀಡಿ ನಗರದ ಜನತೆಯ ಬಗ್ಗೆ ಕಾಳಜಿ ತೋರಿದ್ದಾರೆ ಎಂದು ಪ್ರಶಂಶಿಸಿದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಪ್ರಮುಖರಾದ ಹೆಚ್.ಎ.ಹಂಸ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ನಗರಸಭಾ ಕಮಿಷನರ್ ರಮೇಶ್ , ಸುರಯ್ಯ ಅಬ್ರಾರ್ ಪ್ರಮುಖರಾದ ಪ್ರಕಾಶ್ ಆಚಾರ್ಯ, ಪ್ರಭು ರೈ, ವಸಂತ ಭಟ್, ಜಿ.ಸಿ.ಜಗದೀಶ್, ಮುದ್ದುರಾಜ್ ,ಆರ್ ಪಿ.ಚಂದ್ರಶೇಖರ್, ಮೀನಾಜ್ ಪ್ರವೀಣ್, ಶಶಿ, ಕವನ್ ಕೊತ್ತೊಳಿ, ವಿ.ಜಿ.ಮೋಹನ್, ಅರ್ಜುನ್, ಶರಣ್,ಕಲೀಲ್ ಬಾಷ, ಹನೀಫ್, ಸೇರಿದಂತೆ ನಗರಸಭೆಯ ಸದಸ್ಯರುಗಳು , ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.









