


ವಿರಾಜಪೇಟೆ ಫೆ.13 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿರಾಜಪೇಟೆ ಬಿ,ಸಿ ಟ್ರಸ್ಟ್ ಹಾಗೂ ಸ್ವಸಹಾಯ ಸಂಘಗಳ ಒಕ್ಕೂಟಗಳ ಆಶ್ರಯದಲ್ಲಿ ಪೊನ್ನಂಪೇಟೆ ವಲಯದ ಟಿ-ಶೆಟ್ಟಿಗೇರಿ ಕಾರ್ಯಕ್ಷೇತ್ರದಲ್ಲಿ ನೆಲ ಜಲ ಸಂರಕ್ಷಣೆ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದ ತಡಿಯಂಗಡ ಸೌಮ್ಯ, ನೀರು ಮಾನವನ ಆರೋಗ್ಯವನ್ನು ಕಾಪಾಡುವ ಅವಶ್ಯಕವಾದ ಜೀವ. ಹನಿ ನೀರಿಲ್ಲದೆ ಸಕಲ ಜೀವಿಗಳ ಬದುಕು ಅಸಾಧ್ಯ. ನೆಲ ಜಲ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಮಾಹಿತಿ ನೀಡಿದರು. ಕೃಷಿ ಮೇಲ್ವಿಚಾರಕರಾದ ವಸಂತ್ ಪ್ರಾಸ್ತವಿಕವಾಗಿ ಮಾತನಾಡಿದರು. ಒಕ್ಕೂಟದ ಅಧ್ಯಕ್ಷರಾದ ಸುಶೀಲ, ಒಕ್ಕೂಟದ ಪದಾಧಿಕಾರಿಗಳಾದ ಸರಸ್ವತಿ, ಎಂ.ಡಿ.ಲತಾ, ಉಷಾ, ಸೇವಾ ಪ್ರತಿನಿಧಿ ಗೀತಾ, ರಂಜಿತಾ ಸಂಘದ ಸದಸ್ಯರು ಊರಿನ ಗ್ರಾಮಸ್ಥರು ಹಾಜರಿದ್ದರು.