ಸುಂಟಿಕೊಪ್ಪ ಫೆ.14 NEWS DESK : ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಬೇಕೆಂದು ಸಾರಿಗೆ ಪ್ರಾಧಿಕಾರದ ಅಧಿಕಾರಿ ಶಿವಕುಮಾರ್ ಹೇಳಿದರು. ಸುಂಟಿಕೊಪ್ಪ ವಾಹನ ಚಾಲಕರ ನಿಲ್ದಾನದಲ್ಲಿ 36ನೇ ರಾಷ್ಟ್ರೀಯ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮವನ್ನು ಸಾರಿಗೆ ಪ್ರಾಧಿಕಾರದ ಅಧಿಕಾರಿ ಉದ್ಘಾಟಿಸಿ ವಾಹನ ಚಾಲಕರನ್ನು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ವಾಹನ ಮಾಲಿಕರು ಹಾಗೂ ಚಾಲಕರು ಎಲ್ಲಾ ದಾಖಲಾತಿಯೊಂದಿಗೆ ಜಾಗೃತೆಯಿಂದ ವಾಹನ ಚಾಲನೆ ಮಾಡುವಂತೆ ಮಡಿಕೇರಿ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು ಸಾರ್ವಜನಿಕರಿಗೆ ಹಾಗೂ ಚಾಲಕರಿಗೆ ವಾಹನ ಚಾಲನಾ ಪರವನಾಗಿಯನ್ನು ಹೊಂದದೆ. ವಾಹನ ಚಾಲನೆ ಮಾಡುವುದು ಕಾನೂನು ರೀತಿಯಲ್ಲಿ ಅಪರಾಧವಾಗಿದೆ. ವಾಹನಕ್ಕೆ ಸಂಬಂಧಿಸಿದ ದಾಖಲಾತಿ ಪತ್ರಗಳನ್ನು ವಾಹನದಲ್ಲಿರಿಸಿಕೊಳ್ಳಬೇಕು. ಮೋಜಿಗಾಗಿ ವಾಹನ ಚಲಾಯಿಸಿ ಜೀವಕ್ಕೆ ಕುತ್ತು ತರದಂತೆ ಜಾಗೃತೆ ವಹಿಸಿ ಚಾಲನೆಯಲ್ಲಿ ಮೊಬೈಲ್ ಬಳಸದಿರಿ ಮುಂದೆ ಸಾಗುತ್ತಿರುವ ವಾಹನವನ್ನು ಹಿಂದಿಕ್ಕುವಾಗ ಜಾಗೃತೆ ವಹಿಸಬೇಕು. ಇಲ್ಲದಿದ್ದಲ್ಲಿ ಅಪಘಾತ ಸಂಭವಿಸಿ ಪ್ರಾಣ ಹಾನಿಯಾದರೆ ನಿಮ್ಮನ್ನು ನಂಬಿದ ಕುಟುಂಬದವರನ್ನು ನಡು ನೀರಿನಲ್ಲಿ ಕೈಬಿಟ್ಟು ಅವರ ಜೀವನವನ್ನು ಹಾಳು ಮಾಡದಿರಿ ಎಂದರು. ಮಾಹಿತಿ ಒಂದು ದಿನಕ್ಕೆ ಸೀಮಿತವಾಗಿರದೆ ವರ್ಷಪೂರ್ತಿ ಪಾಲಿಸುವಂತೆ ಕರೆ ನೀಡಿದರು. ಕುಶಾಲನಗರದ ವಿದ್ಯಾಸಾಗರ ಕಲಾವೇದಿಕೆ ತಂಡದ ರಾಜು ಹಾಗೂ ತಂಡದವರಿಂದ ಬೀದಿ ನಾಟಕ ಮಾಡಿ ವಾಹನ ಚಾಲಕರಿಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಈ ಸಂದರ್ಭ ಮಡಿಕೇರಿ ಸಾರಿಗೆ ಪ್ರಾಧಕಾರದ ಅಧಿಕಾರಿ ಶಿವಕುಮಾರ್ ಹಾಗೂ ಪ್ರದೀಪ್, ಸುಂಟಿಕೊಪ್ಪ ಪೊಲೀಸ್ ಸಿಬ್ಬಂದಿಗಳು ವಾಹನ ತರಬೇತುದಾರರು, ಆಟೋ ಚಾಲಕರು ವಾಹನ ಚಾಲಕರು ಬೈಕು ಸವಾರು ಸಾರ್ವಜನಿಕರು ಹಾಜರಿದ್ದರು.











