![](https://newsdeskkannada.com/wp-content/uploads/2025/02/Z-ND-ADVT-16.jpg)
![](https://newsdeskkannada.com/wp-content/uploads/2025/02/Z-ADVT-TEACHERS-10.jpg)
![](https://newsdeskkannada.com/wp-content/uploads/2025/02/Z-SRI-SAI-INSURENCE-8.jpg)
ಮಡಿಕೇರಿ ಫೆ.15 NEWS DESK : ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಸಹಕಾರದಲ್ಲಿ ಕ್ಲಬ್ ಮಹೀಂದ್ರ ವತಿಯಿಂದ ರಕ್ತದಾನ ಶಿಬಿರವು ನಗರದ ಹೊರವಲಯದಲ್ಲಿರುವ ಕ್ಲಬ್ ಮಹೀಂದ್ರದಲ್ಲಿ ನಡೆಯಿತು. ಹೋಟೆಲ್ ಕ್ಲಬ್ ಮಹೀಂದ್ರದ ಸುಮಾರು 45 ಸಿಬ್ಬಂದಿಗಳು ರಕ್ತದಾನ ಮಾಡಿದರು. ಕ್ಲಬ್ ಮಹೀಂದ್ರದ ವ್ಯವಸ್ಥಾಪಕ ಫಾರೂಕ್, ಎಂಜಿನಿಯರ್ ದೀಪಕ್ ಕುಮಾರ್, ಮಾನವ ಸಂಪನ್ಮೂಲ ವಿಭಾಗದ ನವೀನ್ ನೊರೋನಾ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ರಕ್ತನಿಧಿ ವಿಭಾಗದ ಡಾ.ಕರುಂಬಯ್ಯ ಇತರರು ಇದ್ದರು.