![](https://newsdeskkannada.com/wp-content/uploads/2025/02/Z-ND-ADVT-16.jpg)
![](https://newsdeskkannada.com/wp-content/uploads/2025/02/Z-ADVT-TEACHERS-10.jpg)
![](https://newsdeskkannada.com/wp-content/uploads/2025/02/Z-SRI-SAI-INSURENCE-8.jpg)
ನಾಪೋಕ್ಲು ಫೆ.15 NEWS DESK : ಹಲ್ಲುಗಳ ರಕ್ಷಣೆಯ ಬಗ್ಗೆ ಕಾಳಜಿ ವಹಿಸಬೇಕಾದ್ದು ಅತ್ಯಗತ್ಯ ಎಂದು ಮಡಿಕೇರಿ ವಿಜ್ಞಾನ ಮಹಾ ವಿದ್ಯಾಲಯದ ನೋಡಲ್ ಅಧಿಕಾರಿ ಡಾ.ರೇವಣ್ಣ ಹೇಳಿದರು. ಮಡಿಕೇರಿ ವಿಜ್ಞಾನ ಮಹಾವಿದ್ಯಾಲಯ, ವಿರಾಜಪೇಟೆ ದಂತ ಮಹಾವಿದ್ಯಾಲಯ, ಲಯನ್ಸ್ ಕ್ಲಬ್ ನಾಪೋಕ್ಲು, ಗ್ರಾಮ ಅಭಿವೃದ್ಧಿ ಸಂಘ ವೆಸ್ಟ್ ಕೊಳಕೇರಿ ಸಂಯುಕ್ತ ಆಶ್ರಯದಲ್ಲಿ ಕೊಳಕೇರಿ ಗ್ರಾಮ ಅಭಿವೃದ್ಧಿ ಸಂಘದ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಎಲ್ಲರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಅದರಲ್ಲೂ ಹಲ್ಲುಗಳ ಬಗ್ಗೆ ಕಾಳಜಿ ವಹಿಸಬೇಕು. ಚಿಕ್ಕಂದಿನಲ್ಲೇ ಹುಳುಕು ಹಲ್ಲುಗಳ ರಕ್ಷಣೆ ಬಗ್ಗೆ ಕಾಳಜಿ ಹೊಂದಿರುವುದು ಅತ್ಯಗತ್ಯ. ಸಾಮಾನ್ಯವಾಗಿ ಹುಳುಕು ಹಲ್ಲುಗಳು ಮಾನವನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಆರಂಭಿಕ ಹಂತದಲ್ಲಿ ಹುಳುಕು ಹಲ್ಲುಗಳ ತೊಂದರೆ ಕಾಣಿಸಿಕೊಂಡಾಗ ಚಿಕಿತ್ಸೆ ನೀಡಿ ಪರಿಹರಿಸಿಕೊಳ್ಳಬಹುದು. ಹಾಗೆಯೇ ಮನುಷ್ಯನಿಗೆ ವಸಡಿನ ತೊಂದರೆಗಳು ಕಂಡುಬರುತ್ತವೆ. ಆರಂಭದ ಹಂತದಲ್ಲಿ ಚಿಕಿತ್ಸೆ ನೀಡಿ ಸರಿಪಡಿಸಿಕೊಳ್ಳಲು ಸಾಧ್ಯ ಎಂದರು. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಉಚಿತ ದಂತ ತಪಾಸಣೆ ಶಿಬಿರ ಆಯೋಜಿಸಲು ಸಂಘ ಸಿದ್ದವಾಗಿದೆ. ಇದಕ್ಕೆ ದಾನಿಗಳ, ಸಂಘ ಸಂಸ್ಥೆಗಳ ನೆರವು ಅಗತ್ಯ ಎಂದರು. ಕಾಫಿ ಬೆಳೆಗಾರ, ವೆಸ್ಟ್ ಕೊಳಕೇರಿ ಗ್ರಾಮ ಅಭಿವೃದ್ಧಿ ಸಂಘದ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಕಾರ್ಯಕ್ರಮವ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಲಯನ್ಸ್ ಸಂಸ್ಥೆ ಅಧ್ಯಕ್ಷ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ ದೀಪ ಬೆಳಗಿಸಿ ಉದ್ಘಾಟಿಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಮಾತನಾಡಿದರು. ಈ ಸಂದರ್ಭ ಕಾರ್ಯಕ್ರಮದಲ್ಲಿ ಲಯನ್ಸ್ ಕಾರ್ಯದರ್ಶಿ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ, ಗ್ರಾ.ಪಂ ಸದಸ್ಯ ಕನ್ನಂಬೀರ ಸುಧಿ ತಿಮ್ಮಯ್ಯ, ಕುಂಡ್ಯೋಳಂಡ ವಿಷು ಪೂವಯ್ಯ, ಕಾಂಡಂಡ ಕರುಂಬಯ್ಯ, ಕೇಟೋಳಿರ ಹರೀಶ್ ಪೂವಯ್ಯ, ಕುಂಡ್ಯೊಳಂಡ ಗಣೇಶ್ ಮುತ್ತಪ್ಪ, ಕೇಟೋಳಿರ ಫಿರೋಜ್ ಗಣಪತಿ, ಬೋಟ್ಟೋಳಂಡ ಪೊನ್ನಯ್ಯ, ಚೈಯಂಡ ತಿಮ್ಮಯ್ಯ, ಲಯನ್ಸ್ ಕ್ಲಬ್ ಹಾಗೂ ಗ್ರಾಮ ಅಭಿವೃದ್ಧಿ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯ ನೂರ್ ಫಾತಿಮಾ, ದಂತ ಮಹಾವಿದ್ಯಾಲಯದ ವೈದ್ಯಾಧಿಕಾರಿಗಳು ಸಿಬ್ಬಂದಿಗಳು ಶಿಬಿರದಲ್ಲಿ ಭಾಗವಹಿಸಿದ ಗ್ರಾಮಸ್ಥರ ದಂತ ತಪಾಸಣೆಗೊಳಿಸಿ ಸೂಕ್ತ ಚಿಕಿತ್ಸೆ ನೀಡಿ ಮಾರ್ಗದರ್ಶನ ಮಾಡಿದರು.
ವರದಿ : ದುಗ್ಗಳ ಸದಾನಂದ