![](https://newsdeskkannada.com/wp-content/uploads/2025/02/Z-ND-ADVT-16.jpg)
![](https://newsdeskkannada.com/wp-content/uploads/2025/02/Z-ADVT-TEACHERS-10.jpg)
![](https://newsdeskkannada.com/wp-content/uploads/2025/02/Z-SRI-SAI-INSURENCE-8.jpg)
ನಾಪೋಕ್ಲು ಫೆ.15 NEWS DESK : ಚೆರಿಯಪರಂಬು ಮಖಾಂ ಉರೂಸ್‍ಗೆ ಚೆರಿಯಪರಂಬು ಜಮಾಯತ್ ಅಧ್ಯಕ್ಷ ಪಿ.ಎ.ಹಂಸ ಹಾಜಿ ಧ್ವಜಾರೋಹಣ ನೆರವೇರಿಸಿಸುವ ಮೂಲಕ ಚಾಲನೆ ನೀಡಿದರು. ನಮಾಜ್ ಬಳಿಕ ದರ್ಗಾದಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ಉರೂಸ್ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಜಮಾಯತ್ ಉಪಾಧ್ಯಕ್ಷ ಪಿ.ಎಂ.ಶಾದಲಿ, ಕಾರ್ಯದರ್ಶಿ ಅಸೈನರ್ ಹಾಜಿ, ಸಹ ಕಾರ್ಯದರ್ಶಿ ಎಂ.ಜೆ.ಬಶೀರ್, ಖತೀಬರಾದ ಫೈಝಲ್ ಸಖಾಪಿ, ಜಮಾಯತ್ ಹಾಲಿ ಹಾಗೂ ಮಾಜಿ ಸಮಿತಿ ಸದಸ್ಯರು ಹಾಗೂ ಜನಾಂಗಬಾಂಧವರು ಉಪಸ್ಥಿತರಿದ್ದರು. ಉರೂಸ್ ಪ್ರಯುಕ್ತ ಫೆ.18ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.
ವರದಿ : ದುಗ್ಗಳ ಸದಾನಂದ.