![](https://newsdeskkannada.com/wp-content/uploads/2025/02/Z-ND-ADVT-16.jpg)
![](https://newsdeskkannada.com/wp-content/uploads/2025/02/Z-ADVT-TEACHERS-10.jpg)
![](https://newsdeskkannada.com/wp-content/uploads/2025/02/Z-SRI-SAI-INSURENCE-8.jpg)
ವಿರಾಜಪೇಟೆ ಫೆ.15 NEWS DESK : ವಿರಾಜಪೇಟೆಯ ಆದಿಶಕ್ತಿ ಟ್ಯುಟೋರಿಯಲ್ ನ ಐದನೇ ವರ್ಷದ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು. ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಟ್ಯುಟೋರಿಯಲ್ ನ ಅಧ್ಯಕ್ಷ ಅರುಣ್ ಕುಮಾರ್ ಕಳೆದ ಸಾಲಿನಂತೆ ಈ ಸಾಲಿನಲ್ಲಿಯೂ ಶೇ.100ಷ್ಟು ಫಲಿತಾಂಶ ಬಂದು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮುಖ್ಯ ಅತಿಥಿಗಳಾದ ಆರ್.ಕೆ.ಸಲಾಂ ಮಾತನಾಡಿ, ವಿದ್ಯೆ ಮಹತ್ವದ್ದಾಗಿದೆ. ವಿದ್ಯೆ ಇಲ್ಲದಿದ್ದರೆ ಮುಂದಿನ ಜೀವನ ದುಸ್ತರವಾಗಲಿದೆ. ಮುಂದೆ ನಾವು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕಿತ್ತು ಎಂದು ಕೊರಗುವ ಬದಲು ಇಂದೇ ಚೆನ್ನಾಗಿ ಓದಿ ಮುಂದಕ್ಕೆ ಹೋಗುವ ಸಂಕಲ್ಪವನ್ನು ಮಾಡಿ. ಯಾರು ವಿದ್ಯೆಯನ್ನು ಕಡೆಗಣಿಸದೆ ಮುಂದೆ ಬರುವ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಜೀವನವನ್ನು ಯಶಸ್ವಿಯಾಗಿ ನಡೆಸುವಂತಾಗಲಿ ಎಂದು ಕರೆ ನೀಡಿದರು. ಮರಗೋಡು ಪಿ.ಯು.ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪಿ.ಟಿ.ಶಾಜಿ ಮಾತನಾಡಿ, ತಮ್ಮ 36 ವರ್ಷಗಳ ಶಿಕ್ಷಕ ವೃತ್ತಿಯ ಬಗ್ಗೆ ಮಕ್ಕಳಿಗೆ ವಿವರಿಸಿ ಚುಟುಕು ಪ್ರಶ್ನೆಗಳನ್ನು ಕೇಳುತ್ತಾ ಮಕ್ಕಳು ಮುಂದಿನ ಪರೀಕ್ಷೆಗೆ ಯಾವ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ ಹಾಗೂ ಹೇಗೆ ಪರೀಕ್ಷೆಗೆ ಇರುವ ತಯಾರಿಯನ್ನು ಮಾಡಿಕೊಳ್ಳಬೇಕೆಂದು, ಪರೀಕ್ಷೆಯಲ್ಲಿ ಬರೆಯುವ ಒಂದೊಂದು ಅಂಕವು ಎಷ್ಟು ಮುಖ್ಯವಾಗುತ್ತದೆ ಎಂದು ಮಕ್ಕಳಿಗೆ ವಿವರಿಸಿ ಮುಂದಿನ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಯಶಸ್ವಿಯಾಗಿ ಎಂದು ಶುಭ ಹಾರೈಸಿದರು. ಸಂಸ್ಥೆಯ ವ್ಯವಸ್ಥಾಪಕ ಕರಣ್ ಕುಮಾರ್ ಶೆಟ್ಟಿ ಮಾತನಾಡಿ, ಕಳೆದ ಐದು ವರ್ಷಗಳಿಂದ ಸಂಸ್ಥೆ ನಡೆದುಕೊಂಡು ಬಂದ ಹಾದಿಯನ್ನು ವಿವರಿಸಿದರು. ಕಳೆದ ಸಾಲಿನಲ್ಲಿ ಸಂಸ್ಥೆಗೆ ಶೇ.100ರಷ್ಟು ಫಲಿತಾಂಶ ಸಾಧನೆ ಸಂಸ್ಥೆಯ ಶಿಕ್ಷಕರಿಗೆ ಸಲ್ಲಬೇಕು ಎಂದು ಹೇಳಿದರು. ಕಳೆದ ಬಾರಿಯಂತೆ ಈ ಬಾರಿಯೂ ಶೇ100ರಷ್ಟು ಸಾಧನೆಯನ್ನು ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪ್ರಸ್ತುತ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಸಂಸ್ಥೆಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಳೆದ ಬಾರಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಟ್ಯುಟೋರಿಯಲ್ ವತಿಯಿಂದ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಯಗಳಿಸಿದವರಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು. ಶಿಕ್ಷಕಿ ಜಿಸ್ಮ ಸ್ವಾಗತಿಸಿದರು, ಸಮೀನ ನಿರೂಪಿಸಿದರು. ಗಗನ್ ವಂದಿಸಿದರು.