




ಮಡಿಕೇರಿ ಫೆ.20 NEWS DESK : ವಿವಿಧ ಕ್ಷೇತ್ರದಲ್ಲಿ ಆಯ್ಕೆಯಾದ ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಸೌಹಾರ್ಧ ಸಹಕಾರ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಾಲಾ ಗೌರವ ಅಧ್ಯಕ್ಷ ಮಂಡುವಂಡ ಮುತ್ತಪ್ಪ, ನಿರ್ದೇಶಕರಾಗಿ ಆಯ್ಕೆಯಾದ ಶಾಲಾ ಆಡಳಿತ ಅಧಿಕಾರಿ ಮುಕ್ಕಾಟಿರ ಪೊನ್ನಮ್ಮ ಹಾಗೂ ಶಾಲಾ ಆಡಳಿತ ಮಂಡಳಿಯ ನೂತನ ನಿರ್ದೇಶಕಿಯಾಗಿ ಆಯ್ಕೆಯಾದ ತಡಿಯಂಗಡ ಪ್ರೇಮಾ ತಿಮ್ಮಯ್ಯ ಅವರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಕೇಕಡ ವಿಜುದೇವಯ್ಯ, ಸಂಚಾಲಕಿ ಕನ್ನಂಡ ಕವಿತ ಬೊಳ್ಳಪ್ಪ, ನಿರ್ದೇಶಕರಾದ ಕನ್ನಂಡ ಸಂಪತ್ ಕುಮಾರ್, ನಂದಿನೆರವಂಡ ದಿನೇಶ್, ಬೊಪ್ಪಂಡ ಸರಳಾ ಕರುಂಬಯ್ಯ, ಮಂಡಿರ ಸದಾಮುದ್ದಪ್ಪ, ಪುತ್ತರಿರ ಕರುಣ್ ಕಾಳಯ್ಯ, ಪ್ರಾಂಶುಪಾಲರಾದ ಬಾಳೆಯಡ ಸವಿತ ಪೂವಯ್ಯ ಹಾಜರಿದ್ದರು.