




ಮಡಿಕೇರಿ ಫೆ.20 NEWS DESK : ಬೆಂಗಳೂರಿನಲ್ಲಿ ಫೆ.22ರಿಂದ ನಡೆಯಲಿರುವ ಖೇಲೋ ಇಂಡಿಯಾ ಅಂಡರ್ 15 ಮಹಿಳಾ ಫುಟ್ಬಾಲ್ ತಂಡದ ಯುನೈಟೆಡ್ ಎಫ್.ಸಿ ಕೊಡಗು ತಂಡ ಪ್ರಕಟಿಸಲಾಗಿದೆ. ಕೊಡಗು ತಂಡದಲ್ಲಿ ಪಿ.ಪಿ ಕುಶಿ ತಂಗಮ್ಮ, ಸಿ.ಕೆ ನಮ್ರಿತ್ ಪೂವಮ್ಮ, ಪಿ.ಆರ್ ವಿದ್ಯಾ, ಎಂ.ಎಸ್ ಶರ್ವಾ ಸೀತಮ್ಮ, ಡಿ.ಜೆ ವಂಶಿಕ, ಆರ್.ಧನ್ಯ, ಕೆ.ಪಿ ಬ್ರಹ್ಮ್ಯ, ಕೆ.ಎನ್.ವಿದಿತಾ, ಕೆ.ಇ.ಸೋನಾಶ್ರೀ , ಬಿ.ಆರ್.ನೀಕ್ಷಾ, ಎ.ಎಸ್.ಶೃತಿ, ಎಂ.ಎಸ್.ಸೋನಿ, ಯು.ಜನ್ಯಶ್ರೀ, ಕೆ.ಪಿ.ಪೂಜಿತಾ ಹಾಗೂ ವಿ.ಎಸ್ ಸುಪ್ರಿಯಾ ಯುನೈಟೆಡ್ ಎಫ್‌ಸಿ ಕೊಡಗು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತೀಚಿಗೆ ಕೊಡಗು ಯುನೈಟೆಡ್ ಎಫ್‌ಸಿ ತಂಡಕ್ಕೆ ಆಯ್ಕೆ ಪ್ರಕ್ರಿಯೆ ಅಮ್ಮತ್ತಿಯಲ್ಲಿ ನಡೆದಿತ್ತು. ಖೇಲೋ ಇಂಡಿಯಾ ಅಂಡರ್ 15 ಮಹಿಳಾ ಫುಟ್ಬಾಲ್ ಪಂದ್ಯಾವಳಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸುತ್ತಿದ್ದು, ಪ್ರತೀ ತಂಡಗಳು ಲೀಗ್ ಹಂತದಲ್ಲಿ ಎಲ್ಲಾ ತಂಡಗಳ ವಿರುದ್ಧ ಎರಡೆರಡು ಪಂದ್ಯಗಳನ್ನು ಆಡಬೇಕಾಗಿದೆ. ಯುನೈಟೆಡ್ ಎಫ್.ಸಿ ಕೊಡಗು ತಂಡವು ಲೀಗ್ ಮಾದರಿಯಲ್ಲಿ ಹತ್ತು ಪಂದ್ಯಗಳನ್ನು ಆಡಲಿದೆ. ತಂಡದ ವ್ಯವಸ್ಥಾಪಕರಾಗಿ ಹೆಚ್.ಹೆಚ್ ಹರೀಶ್,ತರಬೇತುದಾರರಾಗಿ ಜೆ.ಮಾನಸಾ,ಎಸ್ ಅರವಿಂದ್ ಹಾಗೂ ಎಂ.ವಿ ನಂದಿನಿ ಕಾರ್ಯನಿರ್ವಹಿಸಲಿದ್ದಾರೆ.