ಪಿರಿಯಾಪಟ್ಟಣ ಫೆ.20 NEWS DESK : ತಂಬಾಕು ಬೆಳೆಗಾರರು ಹಾಗೂ ವ್ಯಾಪಾರಸ್ಥರ ಬಹುದಿನದ ಬೇಡಿಕೆ ಹಾಗೂ ಅವರು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಪರಿಹಾರ ನೀಡಿದ ಬಳಿಕ ಇಂದು ಪಿರಿಯಾಪಟ್ಟಣ ತಾಲೂಕಿನ ತಂಬಾಕು ಮಂಡಳಿಗೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿˌ ರೈತರು ಹಾಗೂ ವ್ಯಾಪಾರಸ್ಥರೊಂದಿಗೆ ಸಂವಹನ ನಡೆಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ರೈತ ಆಶೋತ್ತರಗಳಿಗೆ ಸ್ಪಂದಿಸಿ,ˌ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಕಟಿಬದ್ಧವಾಗಿದೆ ಎಂದು ತಿಳಿಸಿದರು.












