


ಸಿದ್ದಾಪುರ ಮಾ.12 NEWS DESK : ನೆಲ್ಲಿಹುದಿಕೇರಿಯಲ್ಲಿರುವ ಕೊಡಗಿನ ಏಕೈಕ ಪುರಾತನ ಕಾಲದ ಶ್ರೀ ಸತ್ಯನಾರಾಯಣ ದೇವರ ವಾರ್ಷಿಕೋತ್ಸವವು ಮಾ.19, 20 ಮತ್ತು 21ರಂದು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಜರುಗಲಿದೆ. ಮಾ.19 ರಂದು ಬೆಳಿಗ್ಗೆ 6.30ಕ್ಕೆ ಗಣಹೋಮದ ಮೂಲಕ ಉತ್ಸವ ಪ್ರಾರಂಭವಾಗಲಿದೆ. ಸಂಜೆ 6.30 ಗಂಟೆಗೆ ತಕ್ಕರ ಮನೆಯಿಂದ ಭಂಡರಾ ಇಳಿಸುವುದು, 7 ಗಂಟೆಗೆ ಪ್ರಾರಂಭ ಶುದ್ಧ ಕಳಸ, ಶ್ರೀ ದೇವರ ಬಲಿ ಬರುವುದು, ಮಹಾಪೂಜೆ ಹಾಗೂ ಶ್ರೀ ದೇವರ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಮಾ.20 ರಂದು ಬೆಳಿಗ್ಗೆ 6.30ಕ್ಕೆ ಇರುಬೆಳಕು, 10.30 ಗಂಟೆಗೆ ಸಾಮೂಹಿಕ ಆಶ್ಲೇಷಬಲಿ, ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆ, ಪಟ್ಟಣಿ ಪ್ರಯುಕ್ತ ಪಲಹಾರ. ಸಂಜೆ 5 ಗಂಟೆಗೆ ಶ್ರೀ ಪೊದಮ್ಮ ದೇವಾಲಯದಲ್ಲಿ ಅಕ್ಕಿಹೇರುವುದು ಹಾಗೂ ಮಹಾಪೂಜೆ ನಡೆಯಲಿದೆ. ನಂತರ ಶ್ರೀ ಸತ್ಯನಾರಾಯಣ ದೇವಾಲಯದಲ್ಲಿ ನೆರಪು ಬಲಿ, ಮಹಾಪೂಜೆ, ಶ್ರೀ ದೇವರ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಮಾ.21 ರಂದು ಬೆಳಿಗ್ಗೆ 8.30 ಗಂಟೆಗೆ ಸಾನಿಧ್ಯ ಕಳಸ, ಬೆಳಿಗ್ಗೆ 9.30 ಗಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ, 1.30 ಗಂಟೆಗೆ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ. ಸಂಜೆ 3.30 ಗಂಟೆಗೆ ತೆಂಗಿನಕಾಯಿಗೆ ಗುಂಡು ಹೊಡೆಯುವುದು, 4.30 ಗಂಟೆಗೆ ದೇವಾಲಯದಿಂದ ಪೋದಮ್ಮ ದೇವಸ್ಥಾನಕ್ಕೆ ತೆರಳಿ ವಸಂತ ಪೂಜೆ, ಬಟ್ಟಲು ಕಾಣಿಕೆ, ನಂತರ ಶ್ರೀ ದೇವರು ಕಾವೇರಿ ನದಿಯ ದಡದಲ್ಲಿ ಅವಭೃತ ಸ್ನಾನಕ್ಕೆ ಹೊರಡುವುದು, ಸಂಜೆ 7.30 ಗಂಟೆಗೆ ದೇವಾಲಯದಲ್ಲಿ ಶ್ರೀ ದೇವರ ಆರಾಟ್ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಶ್ರೀ ದೇವರ ತೀರ್ಥ ಪ್ರಸಾದ ನಂತರ ಅನ್ನಸಂತರ್ಪಣೆ ನಡೆಯಲಿದೆ. ದೇವಸ್ಥಾನದಿಂದ ಭಂಡಾರ ತಕ್ಕರ ಮನೆಗೆ ತಲುಪಿಸುವುದು. ಮಾ.22 ರಂದು ಬೆಳಿಗ್ಗೆ 10.30 ಗಂಟೆಗೆ ಶುದ್ಧ ಕಳಸ, ಮಹಾಪೂಜೆ, ಶ್ರೀ ದೇವರ ತೀರ್ಥ ಪ್ರಸಾದ, ಮಂತ್ರಾಕ್ಷತೆ ಹಾಗೂ ನಂತರ ಅನ್ನಸಂತರ್ಪಣೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ತಕ್ಕ ಮುಖ್ಯಸ್ಥರು, ಕುಟುಂಬಸ್ಥರು ಹಾಗೂ ಆಡಳಿತ ಮಂಡಳಿ ಸದಸ್ಯರು ಕೋರಿದ್ದಾರೆ. ಸಾಮೂಹಿಕ ಆಶ್ಲೇಷಬಲಿ ಮಾಡಿಸುವವರು ರೂ.250 ಹಾಗೂ ಸತ್ಯನಾರಾಯಣ ಪೂಜೆಗೆ ರೂ.300 ಅನ್ನು ದೇವಾಲಯದ ಕಾರ್ಯಕರ್ತರ ಅಥವಾ ಅರ್ಚಕರಿಗೆ ಮುಂಚಿತವಾಗಿ ಹಣ ಪಾವತಿಸಿ ರಶೀದಿ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಅಧ್ಯಕ್ಷರು 9353247287, 9449699660, ಕಾರ್ಯದರ್ಶಿ 9731302496, ಅರ್ಚಕರು 9353247246 ಸಂಪರ್ಕಿಸಬಹುದಾಗಿದೆ.