


ವಿರಾಜಪೇಟೆ ಮಾ.13 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವಿರಾಜಪೇಟೆ ತಾಲ್ಲೂಕು, ಸ್ವಸಾಯ ಸಂಘಗಳ ಒಕ್ಕೂಟಗಳ ಆಶ್ರಯದಲ್ಲಿ ಕೃಷಿ ಕಾರ್ಯಕ್ರಮದಡಿಯಲ್ಲಿ ವಾಣಿಜ್ಯ ನರ್ಸರಿ ರಚನೆ ಮಾಹಿತಿ ಕಾರ್ಯಕ್ರಮ ನಡೆಯಿತು. ಪೊನ್ನಂಪೇಟೆ ವಲಯದ ಹಳ್ಳಿಗಟ್ಟು ಕಾರ್ಯಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸಹಾಯಕ ತೋಟಗಾರಿಕಾ ಅಧಿಕಾರಿ ಬಿ.ಸಿ.ರಮೇಶ್ ಮಾತನಾಡಿ, ತೋಟಗಾರಿಕಾ ಬೆಳೆಗಳಾದ ಕಾಳುಮೆಣಸು, ಅಡಿಕೆ, ಕಿತ್ತಳೆ, ಲಿಂಬೆ ಇನ್ನಿತರ ಬೆಳೆಗಳನ್ನು ತೋಟಗಳಲ್ಲಿ ಬೆಳೆಸುವುದರಿಂದ ಕುಟುಂಬದ ಆದಾಯದ ಜೊತೆಗೆ ಸಣ್ಣಪುಟ್ಟ ಖರ್ಚುಗಳನ್ನು ನಿಭಾಯಿಸಬಹುದು ಎಂದು ತಿಳಿಸಿದರಲ್ಲದೆ ವಾಣಿಜ್ಯ ಗಿಡಗಳಿಗೆ ಬರುವ ರೋಗಗಳಿಗೆ ಸೂಕ್ತ ಸಮಯದಲ್ಲಿ ಔಷಧ ಸಿಂಪಡಿಸಿ ಸಂರಕ್ಷಿಸಬಹುದು ಎಂದು ಇನ್ನಿತರ ಉತ್ತಮ ಮಾಹಿತಿ ತಿಳಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಗ್ರಾಮಸ್ಥರಿಗೆ ವಿವಿಧ ತಳಿಯ ನರ್ಸರಿ ಗಿಡಗಳಾದ ಕಾಳುಮೆಣಸು, ಅಡಿಕೆ, ಲಿಂಬೆ, ಕಿತ್ತಳೆ ಇನ್ನಿತರ ಗಿಡಗಳನ್ನು ವಿತರಿಸಲಾಯಿತು. ವಲಯ ಮೇಲ್ವಿಚಾರಕ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ಮೇಲ್ವಿಚಾರಕ ವಸಂತ್, ಅರವತೊಕ್ಲು ಗ್ರಾಮ ಪಂಚಾಯತ್ ಅಧ್ಯಕ್ಷ ಶರೀಫ್, ಒಕ್ಕೂಟದ ಅಧ್ಯಕ್ಷೆ ಚೈತನ್ಯ, ಕಾರ್ಯದರ್ಶಿ ಗೀತಾ, ಸೇವಾ ಪ್ರತಿನಿಧಿ ಮೋಸಿನಾ, ಸಿಎಸ್ ಸಿ ಸೇವಾದಾರರು ಪ್ರಶಾಂತ್, ಸಂಘದ ಸದಸ್ಯರು ಊರಿನ ಗ್ರಾಮಸ್ಥರು ಭಾಗವಹಿಸಿದರು.