


ಮಡಿಕೇರಿ NEWS DESK ಮಾ.16 : ಮೀಸಲು ಅರಣ್ಯದಲ್ಲಿ ಬೆಂಕಿ ನಂದಿಸಲು ಹೋಗಿದ್ದ ಅರಣ್ಯ ಸಿಬ್ಬಂದಿಗಳ ವಾಹನ ಪಲ್ಟಿಯಾದ ಘಟನೆ ಸೋಮವಾರಪೇಟೆ ವಲಯದ ಹುದುಗೂರು ಯಡನವಾಡು ಬಸವೇಶ್ವರ ದೇವಾಲಯದ ಬಳಿ ನಡೆದಿದೆ. ಘಟನೆಯಿಂದ 12 ಅರಣ್ಯ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಹುದುಗೂರು ಉಪ ವಿಭಾಗಕ್ಕೆ ಸೇರಿದ ಯಡನವಾಡು ಮೀಸಲು ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಪಿಕ್ ಅಪ್ ವಾಹನದಲ್ಲಿ ಅರಣ್ಯ ಸಿಬ್ಬಂದಿಗಳು ತೆರಳಿದ್ದರು. ಮಧ್ಯಾಹ್ನ ಕರ್ತವ್ಯ ಮುಗಿಸಿ ಬರುವ ಸಂದರ್ಭ ಬಸವೇಶ್ವರ ದೇವಾಲಯದ ಬಳಿ ಪಲ್ಟಿಯಾಗಿದೆ. ಗಾಯಾಳುಗಳಿಗೆ ಕುಶಾಲನಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಹುದುಗೂರು ಉಪ ವಲಯ ಅರಣ್ಯಾಧಿಕಾರಿ ಚಂದ್ರೇಶ್, ಸಿಬ್ಬಂದಿಗಳಾದ ವೆಂಕಟೇಶ, ಸಚಿನ್, ವಿನು, ಸತೀಶ್, ಜೀವನ್, ಗಣೇಶ್, ಸುರೇಶ್, ಶ್ರೀ ಕಾಂತ್, ಹರೀಶ್ ಮತ್ತಿತರರು ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಶೈಲೇಂದ್ರ್ ಭೇಟಿ ನೀಡಿದರು.