


ಮಡಿಕೇರಿ ಮಾ.17 NEWS DESK : ಶಿವುಮಾದಪ್ಪ ನಿಧನದಿಂದ ಕಾಂಗ್ರೆಸ್ ಪಕ್ಷದಲ್ಲಿನ ಮತ್ತೊಂದು ಕೊಂಡಿ ಕಳೆದುಕೊಂಡಿದೆ ಎನ್ನಬಹುದು. ನಾನು ರಾಜಕೀಯದಲ್ಲಿ ಸಕ್ರಿಯನಾದರು ಯಾವುದೇ ನಾಯಕರೊಡನೇ ಒಡನಾಟ ಕಮ್ಮಿ. ಏಕೆಂದರೆ ನನಗೆ ಅನಾವಶ್ಯಕವಾಗಿ ಅವರಿಗೆ ಕಿರಿಕಿರಿ ಮಾಡಲು ಇಷ್ಟ ಇಲ್ಲ ಅದು ಎಲ್ಲಾ ನಾಯಕರುಗಳಿಗೂ ಗೊತ್ತು. ಆದರೆ ಎಲ್ಲರೊಡನೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುತ್ತೇನೆ. ಪಕ್ಷದ ಕೆಲಸ ಮಾಡಿ ಸುಮ್ಮನೆ ಇದ್ದು ಬಿಡುತ್ತಿದ್ದೆ. ನಾನು ಮಾನಸಿಕವಾಗಿ ನೋವು ಅನುಭವಿಸಿದ್ದು, ಬಿ.ಟಿ.ಪ್ರದೀಪ್ ಅವರನ್ನು ಕಳೆದುಕೊಂಡಾಗ ಮನದಲ್ಲಿ ಒಂದು ರೀತಿಯ ಮಾನಸಿಕ ಹಿಂಸೆ ಅನುಭವಿಸಿದೆ. ನಾನು ಮೊದಲೇ ಹೇಳಿದಂತೆ ನನಗೆ ಅವರ ಒಡನೆ ಹೇಳಿಕೊಳ್ಳುವ ಒಡನಾಟ ಇರಲಿಲ್ಲ. ಆದರೂ ಅವರು ಮನಸ್ಸಿಗೆ ನಾಟಿಕೊಂಡಿದ್ದರು. ನಾನು ನಾಪೋಕ್ಲುವಿನ ತೋಟಕ್ಕೆ ಬೆಳಿಗ್ಗೆ 7 ಗಂಟೆಗೆ ಹೋಗುವಾಗ ದಾರಿಯಲ್ಲಿ ಅವರ ಕಾರು ಸಿಗುತ್ತಿತ್ತು. ಅಷ್ಟು ಹೊತ್ತಿಗೆ ಮನೆ ಬಿಟ್ಟರೆ ಹಿಂದುರುಗುವುದು ರಾತ್ರಿ ಇದರಲ್ಲಿ ವಿಶೇಷ ಏನು ಇಲ್ಲ. ಎಲ್ಲಾ ರಾಜಕಾರಣಿಗಳು ಮಾಡುವುದು ಇದೇ ಕೆಲಸ, ಇಲ್ಲಿ ಪ್ರಶ್ನೆ ಏನೆಂದರೆ ಇಷ್ಟು ಕಷ್ಟ ಪಟ್ಟು ಪಕ್ಷ ಕಟ್ಟಿ ಕಾಣದ ಕೈಗಳ ಷಡ್ಯಂತ್ರಕ್ಕೆ ಸಿಲುಕಿ ದಿಡೀರನೆ ಅಧಿಕಾರ ಕಳೆದುಕೊಂಡು ಮೂಲೆ ಗುಂಪಾದದ್ದು ರಾಜಕೀಯದಲ್ಲೊಂದು ದುರಂತ. ಅಂದು ಸಜ್ಜನ ರಾಜಕಾರಣಿ ಒಬ್ಬರು ನಮ್ಮಿಂದ ದೂರವಾದರೂ ಅವರ ನೆನಪು ನನ್ನನ್ನು ಬಹುದಿನಗಳವರೆಗೆ ಕಾಡಿತ್ತು. ಅವರು ನನ್ನನ್ನು ಎನ್.ಬಾಳೆಯಡ ಎಳತ್‍ಕಾರ ಎಂದೇ ಕರೆಯುತ್ತಿದ್ದರು. ಯಾವಾಗಲೂ ನೋಡಿದರೂ ಅದೇ ಮುಗುಳ್ನಗೆ. ಮೊನ್ನೆ ಅಕಾಲಿಕವಾಗಿ ನಮ್ಮನ್ನು ಅಗಲಿದ ಶಿವು ಮಾದಪ್ಪನ ನಿಧನ ಸುದ್ದಿ ಕೇಳಿದ ತಕ್ಷಣ ಮನದಲ್ಲಿ ಬಂದದ್ದು, ಬಿ.ಟಿ.ಪ್ರದೀಪ್ ಚಿತ್ರ. ರಾಜಕೀಯದ ಷಡ್ಯಂತ್ರಕ್ಕೆ ಇನ್ನೊಂದು ಜೀವ ಬಲಿಯಾಯಿತು ಅನ್ನಿಸುತ್ತೆ. ಈ ಇಬ್ಬರು ನಾಯಕರದ್ದು ತದ್ವಿರುದ್ಧ ಸ್ವಭಾವ ಒಬ್ಬರದು ಸೌಮ್ಯ ಇನ್ನೊಬ್ಬರು ಡೈನಾಮಿಕ್ ಯಾರನ್ನೂ ಕೇರ್ ಮಾಡದ ಸ್ವಾಭಿಮಾನ, ಶಿವು ತಳಮಟ್ಟದಿಂದ ರಾಜಕೀಯ ಮಾಡಿ ಮೇಲೆ ಬಂದವರು ಹಾಗೇ ನೋಡಿದ್ರೆ ಅವರಿಗೆ ಹಣ ಮತ್ತು ರಾಜ್ಯ ಮತ್ತೆ ಕೇಂದ್ರದ ನಾಯಕರ ನೇರ, ಸಂಪರ್ಕ ಇದ್ದವರು ಅವರಿಗೆ ಜನ ಸೇವೆ ಮಾಡದೇ, ಹಣ ಖರ್ಚು ಮಾಡದೇ ಪಕ್ಷದಲ್ಲಿ ಹುದ್ದೆ ಪಡೆಯಬಹುದಿತ್ತು. ಆದರೆ ಅವರು ರಾಜಕೀಯವನ್ನು ಹವ್ಯಾಸವನ್ನಾಗಿ ಮಾಡಿಕೊಳ್ಳದೆ ವೃತ್ತಿಯಾಗಿ ಕೆಲಸ ಮಾಡಿದವರು ಗ್ರಾಮ ಪಂಚಾಯತ್‍ನಿಂದ ಜಿಲ್ಲಾ ಪಂಚಾಯತ್‍ವರೆಗೆ ಗ್ರಾಮ ಮಟ್ಟದಿಂದ ಜಿಲ್ಲಾಧ್ಯಕ್ಷ ಪಟ್ಟವನ್ನು ಸ್ವಸಾಮಥ್ರ್ಯವಾಗಿ ಪಡೆದವರು. ಬಿಜೆಪಿಯ ಭದ್ರಕೋಟೆಯಲ್ಲಿ ಕಾಂಗ್ರೇಸನ್ನು ಭದ್ರವಾಗಿ ಕಟ್ಟಿ ಬೆಳೆಸಿದವರು. ಅವರು ಜಿಲ್ಲಾಅಧ್ಯಕ್ಷರು ಆದಾಗ ಪಕ್ಷಕ್ಕೆ ಜೀವ ಬರತೊಡಗಿತು. ಆದರೆ ಪಕ್ಷದ ಒಳ ರಾಜಕೀಯಕ್ಕೆ ಬಲಿಯಾದ ಇವರು ಜಿಲ್ಲಾ ಅಧ್ಯಕ್ಷ ಪಟ್ಟವನ್ನು ದಿಡೀರನೆ ಕಳೆದುಕೊಂಡರು. ಅನಂತರದ ದಿನಗಳಲ್ಲಿ ವ್ಯವಸ್ಥೆ ಅವರನ್ನು ರಾಜಕೀಯದಿಂದ ದೂರ ಮಾಡಿತೋ ಅಲ್ಲ ಅವರೇ ರಾಜಕೀಯದಿಂದ ದೂರವಾದರು ತಿಳಿಯದು. ಇತ್ತೀಚಿನ ದಿನಗಳಲ್ಲಿ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿದರು. ಅವರು ಬಂಡಾಯದ ಬಾವುಟವನ್ನು ಹಾರಿಸಲಿಲ್ಲ, ಪಕ್ಷವನ್ನು ಬಿಡಲಿಲ್ಲ, ಒಂದೇ ಒಂದು ವಿರುದ್ಧ ಹೇಳಿಕೆ ನೀಡಲಿಲ್ಲ. ಕೊನೆಯವರೆಗೂ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ಉಳಿದು ಬೇರೆಯವರಿಗೆ ಮಾದರಿಯಾಗಿ ಉಳಿದರು. ಒಂದು ಗ್ರಾಮಪಂಚಾಯತ್ ಟಿಕೆಟ್ ಸಿಕ್ಕದಿದ್ದರೆ ಬಂಡಾಯದ ಬಾವುಟ ಹಾರಿಸಿ ಬೇರೆ ಹುದ್ದೆ ಪಡೆಯಲು ಬ್ಲಾಕ್‍ಮೇಲ್ ನಡೆಸುವಂತ ಕಾಲದಲ್ಲಿ ಅವರು ಎಂದು ಪಕ್ಷ ವಿರೋಧಿ ಚಟುವಟಿಕೆ ನಡಿಸಲಿಲ್ಲ. ಇವರ ನಡುವಳಿಕೆ ರಾಜಕೀಯದಲ್ಲಿ ಇತರರಿಗೆ ಮಾದರಿ ಅಧಿಕಾರ ಇರುವರೆಗೆ ನಾಯಕರ ಹಿಂದೆ ಗುಂಪು ಆವರಿಸುವುದು ಸಕ್ಕರೆ ಇರುವಲ್ಲಿ ಇರುವೆ ಮುತ್ತುವುದು ಸರ್ವೇ ಸಾಮಾನ್ಯ ಹಾಗೇ ಈಗ ಪತ್ರಿಕೆಯಲ್ಲಿ ಸಾಮಾಜಿಕ ಜಾಲದಲ್ಲಿ ವಿವಿಧ ರೀತಿಯ ಸ್ಲೋಗನ್ ಕಂಡು ಹಾಗೂ ಕೇಳಿ ಬರುತ್ತಿದೆ. ಕೇಳಲು ನೀನಿಲ್ಲ ಗೆಳೆಯ ಮತ್ತೋಮ್ಮೆ ಹುಟ್ಟಿ ಬನ್ನಿ ಎಂದು ಕರೆಯುತ್ತಾರೆ ಅಂತ ಬರಬೇಡ ಸ್ವಾರ್ಥದ ರಾಜಕೀಯ ನಿನ್ನನ್ನು ಬಲಿ ಪಡೆಯಿತು. ನಿನ್ನ ಕೊನೆ ದಿನಗಳಲ್ಲಿ ನೀನೇಷ್ಟು ಅಂತರ್ ಮುಖಿಯಾಗಿದ್ದೆ ಎಂಬುದು ನಿನ್ನ ಅರಿತವರಿಗೆ ಗೊತ್ತು ಹೊರತು ಅಧಿಕಾರ ಇದ್ದಾಗ ನಿನ್ನ ಬಳಸಿಕೊಂಡವರಿಗೆ ಹೇಗೆ ಗೊತ್ತಾಗಬೇಕು ಇಲ್ಲಿ ಅಧಿಕಾರ ಪದವಿ ಹಣ ಇದ್ದಾಗ ಎಲ್ಲರೂ ನಮ್ಮವರು ಹೋದರೆ ನಾವು ಒಂಟಿ ಅಂದು ಪ್ರದೀಪ್ ಸತ್ತಾಗ ಜನ ಇದೇ ರೀತಿಯ ಕೂಗು ಕೇಳಿ ಬಂತು. ಈಗ ಪ್ರದೀಪ್ ಯಾರು ಅಂತ ಗೊತ್ತಿಲ್ಲ. ಇನ್ನೂ ಕೆಲವೇ ದಿನಗಳಲ್ಲಿ ನಾವೆಲ್ಲ ನಿನ್ನ ಮರೆತು ಬಿಡುತ್ತೇವೆ ಈಗಿನ ಸಮಾಜದ ವ್ಯವಸ್ಥೆಯೇ ಹಾಗೇ ನಿನ್ನ ಮನೆಯವರಿಗೆ ಮಾತ್ರ ನಷ್ಟ ಹೊರತು ಸಮಾಜಕಲ್ಲ ಎಂಬುದಂತು ಕಟು ಸತ್ಯ ಇತ್ತೀಚಿಗೆ ಪತ್ರಿಕೆಯಲ್ಲಿ ಓದಿದ ನೆನಪು ಮಾಜಿ ಸಚಿವರು ಲೋಕಸಭಾ ಸದಸದ್ಯರು ಆದ ಹೆಚ್.ವಿಶ್ವನಾಥ್ ರವರು ಕುಂಭಮೇಳದಲ್ಲಿ ದಿವಂಗತ ಪ್ರದೀಪ್ ಅವರ ನೆನಪು ಮಾಡಿಕೊಂಡು ಅವರಿಗೆ ಪಿಂಡ ಪ್ರಧಾನ ಮಾಡಿದರು, ಹಾಗೆಯೇ ಮುಂದಿನ ದಿನಗಳಲ್ಲಿ ನಿನನ್ನನ್ನು ಯಾರಾದರೂ ನೆನಪು ಮಾಡಿಕೊಂಡರೆ ಸಾರ್ವಜನಿಕ ಜೀವನದಲ್ಲಿ ನೀನು ಮಾಡಿದ ಸೇವೆಗೆ ಪ್ರತಿಫಲ ಎಂದು ಭಾವಿಸುತ್ತೇನೆ.
ಬಾಳೆಯಡ ಕಿಶನ್ ಪೂವಯ್ಯ
ಲೇಖಕರು ಮತ್ತು ವಕೀಲರು
ಮಡಿಕೇರಿ
ಪೋನ್: 9448899554