



ನಾಪೋಕ್ಲು ಮಾ.18 NEWS DESK : ಪಡಿಯಾಣಿ ಸ.ಹಿ.ಪ್ರಾ.ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಶಾಲೆಗೆ ಟಿವಿಯನ್ನು ಕೊಡುಗೆಯಾಗಿ ನೀಡಿದರು. ಶಾಲೆಯ ಪರವಾಗಿ ಮುಖ್ಯ ಶಿಕ್ಷಕರಾದ ಕೆ.ಸಿ.ದಮೇಂದ್ರ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ಸಹ ಶಿಕ್ಷಕಿಯರಾದ ಎಂ.ಬಿ.ಭಾರತಿ, ಕೆ.ಎ ಹೇಮಾಮಾಲಿನಿ, ಕೆ.ಜೆ.ರಾಧ ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ಪಿ.ಎ.ಅಬ್ದುಲ್ ಅಜೀದ್, ಬಿ.ಎ.ಮೊಯಿದು, ಕೆ.ಎಂ.ಹನೀಫ್, ಎ.ಎಂ ಜುಬೇರ್ ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.