


ಮಡಿಕೇರಿ NEWS DESK ಮಾ.18 : ಮಡಿಕೇರಿ ನಗರದ ಶ್ರೀಕೋದಂಡ ರಾಮೋತ್ಸವ ಸಮಿತಿಯ ಸ್ವಾಗತ ಸಮಿತಿಯ ಮಹಿಳಾ ಅಧ್ಯಕ್ಷರಾಗಿ ಪೂರ್ಣಿಮ ಜಗದೀಶ್ ನೇಮಕಗೊಂಡಿದ್ದಾರೆ. ಮಲ್ಲಿಕಾರ್ಜುನ ನಗರ ಬಡಾವಣೆಯ ಶ್ರೀಕೋದಂಡ ರಾಮ ದೇವಾಲಯದಲ್ಲಿ ಏ.5 ಮತ್ತು 6ರಂದು ರಾಮೋತ್ಸವ ಅದ್ದೂರಿಯಾಗಿ ಜರುಗಲಿದ್ದು, ವಿಜೃಂಭಣೆಯ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.