



ಮಡಿಕೇರಿ ಮಾ.18 NEWS DESK : ಮಡಿಕೇರಿ ತಾಲ್ಲೂಕಿನ ಬಿಳಿಗೇರಿ ಗ್ರಾಮದ ಶ್ರೀ ಭಗವತಿ ದೇವಾಲಯದ ವಾರ್ಷಿಕೋತ್ಸವವು ಮಾ.22 ರಿಂದ ಮಾ.26ರವರೆಗೆ ನಡೆಯಲಿದೆ. ಆರಂಭಿಕ ದಿನವಾದ ಮಾ.22ರಂದು ಬೆಳಗ್ಗೆ 10ಕ್ಕೆ ಗಣಪತಿ ಹೋಮ, ಮಹಾಪೂಜೆ, ಸಂಜೆ 6.30ಗಂಟೆಗೆ ಪ್ರಾರ್ಥನೆ, ತಕ್ಕರ ಮನೆಯಿಂದ ಭಂಡಾರ ತರುವುದು, ಅಂದಿ ಬೆಳಕು, ಪ್ರಸಾದ ವಿತರಣೆ, ಮಾ.23 ರಂದು ಬೆಳಗ್ಗೆ 6.30 ಗಂಟೆಗೆ ದೇವರು ಬಲಿ ಬರುವುದು, ಮಹಾಪೂಜೆ, ಅನ್ನಸಂತರ್ಪಣೆ. ಸಂಜೆ 6.30 ಗಂಟೆಗೆ ಬೆಳಕು, ದೇವರು ಬಲಿ ಬರುವುದು, ಅಂದಿಬೆಳಕು, ಪ್ರಸಾದ ವಿತರಣೆ ನಂತರ ಶ್ರೀ ಪರದೇವರ ಕೋಟದಲ್ಲಿ ಕೊಟ್ಟಿ ಪಾಡುವುದು ಸಾಂಪ್ರದಾಯಿಕ ಆಚರಣೆ ನಡೆಯಲಿದೆ. ಮಾ.24ರಂದು ಬೆಳಗ್ಗೆ 6.30ಕ್ಕೆ ದೇವರ ನೃತ್ಯ ಬಲಿ, ಶ್ರೀ ಎಡೆಕೊಲ್ಲಿ ಅಯ್ಯಪ್ಪ ದೇವರಿಗೆ ಶುದ್ಧ ಕಲಶ, ಮಹಾಪೂಜೆ, ಅನ್ನಸಂತರ್ಪಣೆ. ಸಂಜೆ 6.30 ಗಂಟೆಗೆ ಬೆಳಕು, ದೇವರು ಬಲಿ ಬರುವುದು, ಅಂದಿಬೆಳಕು ಪ್ರಸಾದ ವಿತರಣೆ ನಡೆಯಲಿದೆ. ಮಾ.25 ರಂದು ಬೆಳಗ್ಗೆ 6.30ಕ್ಕೆ ದೇವರ ನೃತ್ಯ ಬಲಿ, ಶ್ರೀ ಪರದೇವರ ಕೋಟದಿಂದ ದೇವರ ಮುಡಿ ಮಲಿಯಪಟ್ಟಿಗೆ ಬರುವುದು, ಶೀ ಅಯ್ಯಪ್ಪ ದೇವರ ಭಂಡಾರ ತರುವುದು, ಎತ್ತು ಪೋರಾಟ, ಹಬ್ಬದ ಕಟ್ಟು ಮುರಿಯುವುದು, ತೆಂಗೆಪೋರು, ಬೆಳಕು, ಮಹಾಪೂಜೆ, ಅನ್ನಸಂತರ್ಪಣೆ, ದೇವರು ಬಲಿ ಬರುವುದು, ಶೀ ಪರದೇವರ, ಶ್ರೀ ಅಯ್ಯಪ್ಪ ದೇವರ, ಕುಟ್ಟಿಚಾತ ದೇವರ ತೆರೆ ಬರುವುದು ಹಾಗೂ ಬನದಲ್ಲಿ ಸಾಂಪ್ರದಾಯಿಕ ಆಚರಣೆ ನಡೆಯಲಿದೆ. ಮಾ.26 ರಂದು ಸಂಜೆ 4-30 ಗಂಟೆಗೆ ಬೆಳಕು, ದೇವರು ಬಲಿ ಬರುವುದು ನಂತರ ದೇವರ ಜಳಕ, ದೇವರ ನೃತ್ಯ ಬಲಿ, ಅನ್ನಸಂತರ್ಪಣೆ ಮತ್ತು ಮಂತ್ರಾಕ್ಷತೆ ಕಾರ್ಯ ನಡೆಯಲಿದೆಯೆಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.