


ವಿರಾಜಪೇಟೆ ಮಾ.22 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ವಿರಾಜಪೇಟೆ ತಾಲೂಕು, ಸ್ವಸಹಾಯ ಸಂಘಗಳ ಒಕ್ಕೂಟಗಳ ಆಶ್ರಯದಲ್ಲಿ ಕೃಷಿ ಕಾರ್ಯಕ್ರಮದಡಿಯಲ್ಲಿ ಮಣ್ಣು ಪರೀಕ್ಷೆ ಮಾಹಿತಿ ಕಾರ್ಯಕ್ರಮ ಅಮ್ಮತ್ತಿ ವಲಯದ ಚೆಂಬೆಬೆಳ್ಳೂರು ಕಾರ್ಯಕ್ಷೇತ್ರದಲ್ಲಿ ನಡೆಯಿತು. ಚೆಂಬೆಬೆಳ್ಳೂರು ಗ್ರಾಮದ ಕೃಷ್ಣಪ್ಪ ಅವರ ಕೃಷಿ ತಾಕುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಣ್ಣು ವಿಜ್ಞಾನ ವಿಷಯ ತಜ್ಞ ಡಾ. ಕೆ.ಟಿ.ಮೋಹನ್ ಕುಮಾರ್ ಮಾತನಾಡಿ, ಮಣ್ಣು ಪರೀಕ್ಷೆ, ಮಣ್ಣು ಆರೋಗ್ಯ ಕಾರ್ಡ್ ಬಗ್ಗೆ ವಿವರಿಸಿ ಆರೋಗ್ಯಕರ ಮಣ್ಣು ಆರೋಗ್ಯಕರ ನಾವು- ಮಣ್ಣೆ ಜೀವನದ ಮೂಲ. ಸಸ್ಯ ಪೋಷಕಾಂಶಗಳು ಮಣ್ಣು ಪರೀಕ್ಷೆ ಮಹತ್ವ ಮಣ್ಣು ಮಾದರಿ ಸಂಗ್ರಹಿಸಲು ಗಮನಿಸಬೇಕಾದ ಅಂಶಗಳು. ಮಣ್ಣು ಮಾದರಿ ಸಂಗ್ರಹಣೆ ಪ್ರಕ್ರಿಯೆ ಬಗ್ಗೆ ಉತ್ತಮ ಮಾಹಿತಿ ನೀಡಿದರು. ಅಮ್ಮತ್ತಿ ವಲಯದ ಮೇಲ್ವಿಚಾರಕರಾದ ದನೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ಮೇಲ್ವಿಚಾರಕರಾದ ವಸಂತ್, ಚೆಂಬೆಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಕಲಾ, ಒಕ್ಕೂಟದ ಅಧ್ಯಕ್ಷ ಶಶಿಕಲಾ, ಉಪಾಧ್ಯಕ್ಷ ಸುಮ, ಶೌರ್ಯ ತಂಡದ ಸಂಯೋಜಕ ಜೀವನ್ ಸೇವಾ ಪ್ರತಿನಿಧಿ ದೇವಕಿ, ಸಿಎಸ್‍ಸಿ ಸೇವಾದಾರರು ದಿವ್ಯ, ಸಂಘದ ಸದಸ್ಯರು ಊರಿನ ಗ್ರಾಮಸ್ಥರು ಭಾಗವಹಿಸಿದರು.