


ಮಡಿಕೇರಿ NEWS DESK ಮಾ.23 : ಇಸ್ರೇಲ್ ದೇಶವು ಕದನ ವಿರಾಮವನ್ನು ಉಲ್ಲಂಘಿಸಿ ಫಾಲೆಸ್ತೀನಿನ ಯುದ್ಧ ಪೀಡಿತ ಗಾಝಾ ಪಟ್ಟಿಯ ಮೇಲೆ ನಿರಂತರ ಆಕ್ರಮಣ ನಡೆಸಿ ಪುಟ್ಟ ಮಕ್ಕಳು ಸೇರಿದಂತೆ 600 ಜನರ ಮಾರಣಹೋಮ ನಡೆಸಿದೆ ಎಂದು ಆರೋಪಿಸಿ ಮತ್ತು ಘಟನೆಯನ್ನು ತೀವ್ರವಾಗಿ ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಮಡಿಕೇರಿ ನಗರ ಘಟಕ ಮಾರುಕಟ್ಟೆ ಬಳಿ ಪ್ರತಿಭಟನೆ ನಡೆಸಿತು. ಭಾರತ ಸರ್ಕಾರವು ತಕ್ಷಣ ಮಧ್ಯ ಪ್ರವೇಶ ಮಾಡಿ ಶಾಂತಿ ಸ್ಥಾಪನೆಗಾಗಿ ಪ್ರಯತ್ನಿಸಬೇಕು, ಇಸ್ರೇಲ್ ದೇಶದೊಂದಿಗಿನ ಎಲ್ಲಾ ವಿಧದ ರಾಜತಾಂತ್ರಿಕ ಸಂಭಂದಗಳನ್ನು ಮೊಟಕುಗೊಳಿಸಬೇಕು, ಇಸ್ರೇಲ್ ನ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಅಮಿನ್ ಮೊಹಿಸಿನ್, ನಗರ ಸಮಿತಿ ಉಪಾಧ್ಯಕ್ಷ ಮೈಕಲ್ ವೇಗಸ್, ಪಕ್ಷದ ನಗರಸಭಾ ಸದಸ್ಯರುಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.