


ಮಡಿಕೇರಿ ಮಾ.24 NEWS DESK : ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡುಮಂಗಳೂರು ಪೂರ್ಣಚಂದ್ರ ಬಡಾವಣೆಯಲ್ಲಿರುವ ದಂಡಿನ ಚೌಡೇಶ್ವರಿ ಅಮ್ಮನವರ ವಾರ್ಷಿಕ ಮಹೋತ್ಸವು ಎರಡು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು.
ದೇವಾಲಯದಲ್ಲಿ ಗಣಪತಿ ಹೋಮ, ದುರ್ಗಾ ಹೋಮ, ವನಕಳಸ ಸ್ಧಾಪನೆ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ಗಳನ್ನು ಕುಶಾಲನಗರದ ಪರಮೇಶ್ ಭಟ್ ಮತ್ತು ತಂಡದವರು ನೆರವೇರಿಸಿದರು. ಸಂಜೆ ವಿದ್ಯುತ್ ಅಲಂಕೃತ ಭವ್ಯ ಮಂಟಪದಲ್ಲಿ ಶ್ರೀ ದೇವಿಯ ವಿಗ್ರಹವನ್ನು ಕುಳ್ಳಿರಿಸಿ ಪೂಜೆ ಸಲ್ಲಿಸಿ ನಾಡ ವಾದ್ಯ ಮೇಳದೊಂದಿಗೆ ಮೆರವಣಿಗೆಯು ಕೂಡುಮಂಗಳೂರು ಗ್ರಾಮದಿಂದ ಹಾಸನ ಹೆದ್ದಾರಿ ರಸ್ತೆಯ ಮೂಲಕ ಕೂಡಿಗೆ ಡೈರಿ ಸರ್ಕಲ್ ಮತ್ತು ಸರ್ಕಲ್ ಮೂಲಕ ಸಾಗಿ ದೇವಸ್ಥಾನದ ಸ್ವ ಸ್ಧಾನಕ್ಕೆ ತೆರಳಿತು. ಈ ಸಂದರ್ಭ ದಂಡಿನ ಚೌಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ನಂಜಪ್ಪ, ಕಾರ್ಯದರ್ಶಿ ಹರೀಶ್ ಕುಮಾರ್, ಖಜಾಂಚಿ ಮಹೇಶ್ ಕುಮಾರ್, ಗೌರವ ಕಾರ್ಯದರ್ಶಿ ಸುಕೇಶ್ ಗೌರವ ಅಧ್ಯಕ್ಷ ರಮೇಶ್ ಸೇರಿದಂತೆ ಸಮಿತಿಯ ಸದಸ್ಯರು, ಕೂಡಿಗೆ, ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನೂರಾರು ಭಕ್ತಾಧಿಗಳು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.