


ಚೆಟ್ಟಳ್ಳಿ ಮಾ.24 NEWS DESK : ಚೆಟ್ಟಳ್ಳಿ ಲಕ್ಷ್ಮಿ ಫಂಡಿನ ನೂತನ ಅಧ್ಯಕ್ಷರಾಗಿ ನಿವೃತ್ತ ಸೇನಾನಿ ಪುತ್ತರಿರ ದೇವಯ್ಯ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಟ್ಟೀರ ರಕ್ಷುಕಾಳಪ್ಪ, ಕಾರ್ಯದರ್ಶಿ ಮುಳ್ಳಂಡ ಕಾಳಪ್ಪ, ನಿರ್ದೇಶಕರಾಗಿ ಬಟ್ಟೀರ ಶರೀನ್, ಬಟ್ಟೀರ ಗಿರೀಶ್ ಬಿದ್ದಪ್ಪ, ಪುತ್ತರಿರ ಶಿವು ನಂಜಪ್ಪ, ಬಟ್ಟೀರ ಚಿರಂತ್ ಚಂಗಪ್ಪ ಅವರನ್ನು ವಾರ್ಷಿಕ ಮಹಾ ಸಭೆಯಲ್ಲಿ ಆಯ್ಕೆಮಾಡಲಾಯಿತು. ಮುಳ್ಳಂಡ ಕಾಳಪ್ಪ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಬಟ್ಟೀರ ಶರೀನ್ ಸ್ವಾಗತಿಸಿ, ರಕ್ಷುಕಾಳಪ್ಪ ವಂದಿಸಿದರು.